ಜ. 21 – 26 : ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾ – ವಾರ್ಷಿಕ ಮಹೋತ್ಸವ

ಕಾರ್ಕಳ : ಕ್ರೈಸ್ತ ಶ್ರದ್ಧಾ ಕೇಂದ್ರ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ವಾರ್ಷಿಕ ಮಹೋತ್ಸವ ಜ. 21 ರಿಂದ 26 ರವರೆಗೆ ಜರುಗಲಿದೆ.

ಕೇಳಿರಿ ನಿಮಗೆ ಕೊಡಲಾಗುವುದು – ಎಂಬ ಮಹೋತ್ಸವದ ವಿಷಯದೊಂದಿಗೆ 5 ದಿನ ಉತ್ಸವ ಮತ್ತು ಬಲಿ ಪೂಜೆಗಳು ನಡೆಯಲಿದೆ.

ಜ. 21ರಂದು ಸಂಜೆ 4.30ಕ್ಕೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಅಲೋಶಿಯಸ್ ಪ್ಲಾವ್ ಡಿಸೋಜಾ ಅವರು ಪವಿತ್ರ ಗ್ರಂಥವನ್ನು ಅರ್ಥ ಮಾಡಿಕೊಳ್ಳುವಂತೆ ಅವರ ಬುದ್ಧಿಯನ್ನು ವಿಕಾಸಗೊಳಿಸಿದರು (ಕೊಂಕಣಿ) ಎಂಬ ವಿಷಯದ ಕುರಿತು ಸಂದೇಶ ನೀಡಲಿದ್ದಾರೆ. ಜ. 22ರಂದು ಸಂಜೆ 6 ಗಂಟೆಗೆ ಶಿವಮೊಗ್ಗದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೋ ಅವರು ಎಡೆಬಿಡದೇ ಪ್ರಾರ್ಥಿಸೋಣ ವಿಷಯದ (ಕನ್ನಡ) ಕುರಿತು ಸಂದೇಶ ನೀಡಲಿರುವರು. ಜ. 23ರಂದು ಸಂಜೆ 5.30ಕ್ಕೆ ಪುತ್ತೂರು ಧರ್ಮಾಧ್ಯಕ್ಷ ಜೀವರ್ಗಿಸ್ ಮಾರ್ ಮಕಾರಿಯೊಸ್ ಅವರು ಪ್ರಲೋಧನೆಗೆ ಒಳಗಾಗದಂತೆ ಪ್ರಾರ್ಥಿಸೋಣ (ಕನ್ನಡ) ವಿಷಯದ ಕುರಿತು ಸಂದೇಶ ನೀಡಲಿದ್ದಾರೆ.

ಜ. 24ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಅವರಿಂದ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು (ಕೊಂಕಣಿ) ವಿಷಯದ ಕುರಿತು ಸಂದೇಶ, ಜ. 25ರ ಬೆಳಿಗ್ಗೆ 10 ಗಂಟೆಗೆ ಮಂಗಳೂರು ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ವಿನಮ್ರರಾಗಿ ಪ್ರಾರ್ಥಿಸೋಣ (ಕೊಂಕಣಿ) ವಿಷಯದ ಕುರಿತು ಹಾಗೂ ಜ. 26ರಂದು ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ಧರ್ಮಾಧ್ಯಕ್ಷ ಲೊರೆನ್ಸ್ ಮಕ್ಕುಝಿ ಅವರು ವಿಶ್ವಾಸಭರಿತ ಪ್ರಾರ್ಥನೆ ರೋಗಿಯನ್ನು ಗುಣಪಡಿಸುತ್ತದೆ (ಕನ್ನಡ) ಎಂಬ ವಿಷಯದ ಕುರಿತು ಸಂದೇಶ ನೀಡಲಿದ್ದಾರೆ.

ಸಂತ ಲಾರೆನ್ಸರ ಗೌರವಾರ್ಥ ನವೇನ ಪ್ರಾರ್ಥನೆಯು ಜ. 12 ರಂದು ಆರಂಭಗೊಂಡಿದೆ. ಜ. 21 ರಿಂದ 26 ರವರೆಗೆ ಪ್ರತಿನಿತ್ಯ ದಿನದ ಪ್ರಥಮ ಪೂಜೆ ಬೆಳಿಗ್ಗೆ 8 ಗಂಟೆಗೆ ಹಾಗೂ ಕೊನೆಯ ಪೂಜೆ ರಾತ್ರಿ 8.30ಕ್ಕೆ ನೆರವೇರಲಿದೆ. ಮಂಗಳವಾರ, ಬುಧವಾರ, ಗುರುವಾರ ದಿನದ ಕೊನೆಯ ಪೂಜೆ ರಾತ್ರಿ 10 ಗಂಟೆಗೆ ನಡೆಯಲಿದೆ. ಜ. 26ರಂದು ಅಸ್ವಸ್ಥರು ಮತ್ತು ಮಕ್ಕಳಿಗಾಗಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ವಿಶೇಷ ಪೂಜೆಗಳು ನೆರವೇರಲಿದೆ ಎಂದು ಸಂತ ಲಾರೆನ್ಸ್ ಬಸಿಲಿಕದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.





























































































error: Content is protected !!
Scroll to Top