ಚೀನಾದಲ್ಲಿ ಪ್ರಬಲ ಭೂಕಂಪ : 111 ಸಾವು

ಬೀಜಿಂಗ್‌ : ವಾಯವ್ಯ ಚೀನಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಕಟ್ಟಡಗಳು ಕುಸಿದು ಕನಿಷ್ಠ 111 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ನಸುಕಿನ ಹೊತ್ತು ಭೂಕಂಪ ಸಂಭವಿಸಿದೆ ಎನ್ನಲಾಗಿದೆ. ರಕ್ಷಣಾ ಕಾರ್ಯಕರ್ತರು ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಪ್ರಬಲವಾದ ಕಂಪನದ ನಂತರ ಗನ್ಸು ಪ್ರಾಂತ್ಯದಲ್ಲಿ ಸುಮಾರು 100 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಭೂಕಂಪ ಪರಿಹಾರ ಕೇಂದ್ರವನ್ನು ಉಲ್ಲೇಖಿಸಿ ಸಿಸಿಟಿವಿ ಚಾನೆಲ್‌ ಹೇಳಿದೆ. ಭೂಕಂಪದಿಂದ ಹಲವು ಮನೆಗಳು ಕುಸಿದಿವೆ, ಜನ ರಕ್ಷಣೆಗಾಗಿ ಬೀದಿಗೆ ಓಡಿ ಬಂದಿದ್ದಾರೆ.
ಮಂಗಳವಾರ ಮುಂಜಾನೆ ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು, ಅವಶೇಷಗಳ ಅಡಿ ಸಿಲುಕಿರುವವ ರಕ್ಷಣೆಗೆ ಎಲ್ಲಾ ಪ್ರಯತ್ನ ಮಾಡುವುದಾಗಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ. ಯುಎಸ್ ಜಿಯೋಲಾಜಿಕಲ್ ಸರ್ವೆ ರಿಕ್ಟರ್ ಮಾಪಕದಲ್ಲಿ 5.9 ಎಂದು ದಾಖಲಿಸಲಾದ ಭೂಕಂಪ ಹೈಡಾಂಗ್ ಇರುವ ಕಿಂಗ್ಹೈ ಗಡಿಯ ಸಮೀಪವಿರುವ ಗನ್ಸು ಎಂಬಲ್ಲಿ ಸಂಭವಿಸಿದೆ.















































































































































error: Content is protected !!
Scroll to Top