ಓಡಿ ಹೋದ ಜೋಡಿ : ಸೋದರಮಾವನನ್ನು ಬೆತ್ತಲೆಗೊಳಿಸಿ ಹಲ್ಲೆ

ಹಾವೇರಿ : ಬೆಳಗಾವಿಯಲ್ಲಿ ಪ್ರೀತಿಸಿದ ಯುವತಿ ಜತೆ ಮಗ ಓಡಿ ಹೋದ ಎಂಬ ಕಾರಣಕ್ಕೆ ಮಹಿಳೆಯನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಹೀನಾಯ ಕೃತ್ಯ ಇನ್ನೂ ಧಗಧಗಿಸುತ್ತಿರುವಾಗಲೇ ಇದೇ ಮಾದರಿಯ ಘಟನೆಯೊಂದು ಹಾವೇರಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಬೆಳಗಾವಿ ಘಟನೆ ಸದನದಿಂದ ಹಿಡಿದು ಇಡೀ ದೇಶದಲ್ಲಿ ಭಾರಿ ಸುದ್ದಿ ಮಾಡಿದೆ. ಹಾವೇರಿಯಲ್ಲಿ ಪ್ರೇಮಿಗಳು ಓಡಿಹೋದದ್ದಕ್ಕೆ ಯುವಕನ ಸೋದರಮಾವನನ್ನು ಅರೆಬೆತ್ತಲೆ ಮಾಡಿ ಹಲ್ಲೆ ಮಾಡಲಾಗಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮುದೇನೂರ ಗ್ರಾಮದಲ್ಲಿ ಯುವಕ-ಯುವತಿ ಪ್ರೀತಿಸಿ ಓಡಿ ಹೋದರು ಎಂಬ ಕಾರಣಕ್ಕೆ ಯುವತಿಯ ಕಡೆಯವರು ಯುವಕನ ಸೋದರಮಾವನನ್ನು ಅರೆಬೆತ್ತಲೆ ಮಾಡಿ ಥಳಿಸಿದ್ದಾರೆ. ರಾಣೆಬೆನ್ನೂರು ತಾಲೂಕಿನ ಮುದೇನೂರ ಗ್ರಾಮದ ಯುವಕನೊಂದಿಗೆ ಚಳಗೇರಿ ಗ್ರಾಮದ ಯುವತಿ ಓಡಿ ಹೋಗಿದ್ದಾಳೆ. ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಂಬಂಧಿಕರು ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಮತ್ತೊಂದೆಡೆ ಓಡಿ ಹೋದ ಯುವಕನ ಸೋದರಮಾವ ಪ್ರಶಾಂತ್ ಎಂಬವರನ್ನು ಕಿಡ್ನಾಪ್ ಮಾಡಿ ರಾಣೆಬೆನ್ನೂರ ಗ್ರಾಮೀಣ ಠಾಣೆಯ ಎದುರೇ ಅರೆಬೆತ್ತಲೆ ಮಾಡಿ ಯುವತಿಯ ಸಂಬಂಧಿಕರು ಹಲ್ಲೆ ಮಾಡಿದ್ದಾರೆ.
ಬೆಳಗಾವಿ ಘಟನೆ ಬಳಿಕ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತೆ ಎಂದು ಸರ್ಕಾರ ಹೇಳಿತ್ತು. ಆದರೆ ಆಗ ಇದೇ ರೀತಿಯ ದೌರ್ಜನ್ಯಗಳು ಮುಂದುವರಿದಿದೆ.















































































































































error: Content is protected !!
Scroll to Top