ಕಾರ್ಕಳ : ಕೌಡೂರು ರಂಗನಪಲ್ಕೆ ಶ್ರೀ ದೇವಿ ಬಯಲಾಟ ಸಮಿತಿ ಹತ್ತು ಸಮಸ್ತರು ವತಿಯಿಂದ ಡಿ. 12 ರಂದು ರಂಗನಪಲ್ಕೆ ಎಲಿಯಾಳ ಶಾಲಾ ವಠಾರದಲ್ಲಿ 7ನೇ ವರ್ಷದ ಯಕ್ಷಗಾನ ಬಯಲಾಟ ಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಪ್ರದರ್ಶನಗೊಳ್ಳಲಿದೆ.
ಅಂದು 6 ಗಂಟೆಗೆ ಚೌಕಿ ಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯಾಗಿ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಡಿ. 12 : ಕೌಡೂರಿನಲ್ಲಿ 7ನೇ ವರ್ಷದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ






























































