ಕಾರ್ಕಳ : 110/11 ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಫೀಡರ್ ಗಳಾದ ನಂದಳಿಕೆ, ಬೆಳ್ಮಣ್ ಮತ್ತು ಸೂಡ ಫೀಡರ್ನಲ್ಲಿ ಅ. 31 ರಂದು ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಆದ್ದರಿಂದ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಳ್ಮಣ್, ಬೆಳ್ಮಣ್ ದೇವಸ್ಥಾನ, ಗೋಳಿಕಟ್ಟೆ, ನಂದಳಿಕೆ, ಜಂತ್ರ, ನೀಚಾಲು, ಕೆದಿಂಜೆ, ಮಾವಿನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಸೂಡ ಸಕ್ಕೇರಿಬೈಲು, ಕೊರಜೆ, ಸೂಡಿ ಗರಡಿ, ಪಡುಬೆಟ್ಟು, ಸೂಡ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಬಜಗೋಳಿ ಪರಿಸರದಲ್ಲಿ ವಿದ್ಯುತ್ ನಿಲುಗಡೆ
ಲೈನ್ ಶಿಪ್ಟಿಂಗ್ ಕಾಮಗಾರಿ ನಡೆಯಲಿರುವುದರಿಂದ ಅ. 31 ರಂದು 220/110/11 ಕೆವಿ ಕೇಮಾರ್ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಬಜಗೋಳಿ, ಹೊಸ್ಮಾರು ಮತ್ತು ಮಿಯ್ಯಾರು ಫೀಡರಿನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು. ಆದ್ದರಿಂದ ಬಜಗೋಳಿ, ಮುಡಾರು, ಕಡಾರಿ, ಮುಳ್ಳೂರು, ಮಾಳ, ಗುರ್ಗಲ್ ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಹೊಸ್ಮಾರು, ಈದು, ನಲ್ಲೂರು, ಜೋಡುಕಟ್ಟೆ, ಕುಂಟಿಬೈಲು, ಮಿಯ್ಯಾರು, ರೆಂಜಾಳ, ಬೊರ್ಕಟ್ಟೆ, ರಾಮೇರಗುತ್ತು, ಕಾಜರಬೈಲು, ಅಡ್ಕರಪಲ್ಕೆ, ಕುರ್ಕಲ್ ಪಲ್ಕೆ, ಹಿನಾಪಾಡಿ, ನೆಲ್ಲಿಗುಡ್ಡೆ, ಕಳತ್ರಪಾದೆ, ಮಂಜಡ್ಕ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
ಅಜೆಕಾರಿನ ವಿವಿಧೆಡೆ ವಿದ್ಯುತ್ ಸ್ಥಗಿತ
10/11 ಕೆವಿ ಕಾರ್ಕಳ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11ಕೆವಿ ಅಜೆಕಾರು ಫೀಡರಿನಲ್ಲಿ ಮಾರ್ಗನಿರ್ವಹಣಾ ಕಾಮಗಾರಿಯಿರುವುದರಿಂದ ಅ. 31 ರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹೆರ್ಮುಂಡೆ ದೇವಸ್ಥಾನ, ಹಂಚಿಕಟ್ಟೆಯಲ್ಲಿ, ನ. 2 ರಂದು ಶಿರ್ಲಾಲು, ಹಾಡಿಯಂಗಡಿ ಹಾಗೂ ನ. 3 ರಂದು ಅಜೆಕಾರು, ಬೊಂಡುಕುಮೇರಿ, ಮರ್ಣೆ, ಅಂಡಾರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.































































