ಕೇರಳದ ಕಣ್ಣೂರಿನಲ್ಲಿ ಸಂಭವಿಸಿದ ದುರ್ಘಟನೆ
ಪುತ್ತೂರು: ಕಡಬದ ಯುವಕನೋರ್ವ ರೈಲಿನಿಂದ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.ಕಡಬ ತಾಲೂಕಿನ ಮರ್ದಾಳ ಬಂಟ್ರ ಗ್ರಾಮದ ನೀರಾಜೆ ನಿವಾಸಿ ಸುರೇಶ್ (34) ಮೃತ ಯುವಕ.
ನೀರಾಜೆಯ ಸುರೇಶ್ ಕೇರಳದಲ್ಲಿ ಟಿಂಬರ್ ಕೆಲ ಮಾಡುತ್ತಿದ್ದು, ಗುರುವಾರ ರಾತ್ರಿ ಮನೆ ಮಂದಿಗೆ ಕರೆ ಮಾಡಿ ರೈಲಿನಲ್ಲಿ ಊರಿಗೆ ಬರುತ್ತಿರುವ ವಿಚಾರ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಮುಂಜಾನೆ 8 ಗಂಟೆ ಸುಮಾರಿಗೆ ಅವರ ಮನೆಯವರು ಮೊಬೈಲ್ ನಂಬರ್ ಕರೆ ಮಾಡಿದರೆ ಆಸ್ಪತ್ರೆಯ ಸಿಬ್ಬಂದಿ ಫೋನ್ ಕರೆ ಸ್ವೀಕರಿಸಿ ಸುರೇಶ್ ಮೃತಪಟ್ಟಿರುವ ವಿಚಾರ ತಿಳಿಸಿದ್ದಾರೆ. ಚೌತಿ ಹಬ್ಬದ ಹಿನ್ನೆಲೆ ಮನೆಗೆ ಬಂದು ಮತ್ತೆ ಕೆಲಸಕ್ಕೆಂದು ಹೋಗಿದ್ದ ಸುರೇಶ್, ಇದೀಗ ದುರಂತ ಅಂತ್ಯ ಕಂಡಿದ್ದಾರೆ






























































