ಕಾರ್ಕಳ : ಉಡುಪಿ ಜಿಲ್ಲಾ ವಿಶ್ವಕರ್ಮ ಎಜ್ಯುಕೇಶನ್ ಟ್ರಸ್ಟ್ ವಿಶ್ವ ಬ್ರಾಹ್ಮಣ ಸಮಾಜದ ಬಡ (ಬಿಪಿಎಲ್ ಕಾರ್ಡುದಾರರು) ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.
ಉಡುಪಿ ಜಿಲ್ಲೆಯಲ್ಲಿ ವಾಸವಾಗಿದ್ದು, ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಈ ಕೆಳಗೆ ತಿಳಿಸಿರುವ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ಮತ್ತು ಲ್ಯಾಟರಲ್ ಎಂಟ್ರಿ ನಿಯಮದಂತೆ ಡಿಪ್ಲೋಮಾ, ದ್ವಿತೀಯ ಬಿ. ಇ. ಮತ್ತು ದ್ವಿತೀಯ ಎಂ.ಸಿ.ಎ ಕೋರ್ಸುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು.
-ಪಾಲಿಟೆಕ್ನಿಕ್ ಡಿಪ್ಲೋಮಾ, ನರ್ಸಿಂಗ್ ಡಿಪ್ಲೋಮಾ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ಡಿಪ್ಲೋಮಾ, ಎಜ್ಯುಕೇಶನಲ್ ಡಿಪ್ಲೋಮಾ (ಡಿ.ಎಡ್)
-ಬಿ.ವಿ.ಎ., ಬಿ.ಎಸ್.ಡಬ್ಲ್ಯೂ, ಬಿ.ಎಸ್.ಸಿ. (ನರ್ಸಿಂಗ್ ಮತ್ತು ಲ್ಯಾಬ್ ಟೆಕ್ನಾಲಜಿ) ಬಿ.ಎಡ್, ಇಂಟೀರಿಯರ್ ಡಿಸೈನ್, ಕಾನೂನು, ಲೆಕ್ಕಪರಿಶೋಧನೆ, ಸಂಸ್ಕೃತ-ವೇದ ವಿದ್ವತ್
-ಸ್ನಾತಕೋತ್ತರ ಪದವಿ (ಎಂ.ಎ., ಎಂ.ಕಾಂ., ಎಂ.ಎಸ್.ಸಿ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ)
-ಎಂಜಿನಿಯರಿಂಗ್ ಪದವಿ (ಬಿ.ಇ., ಬಿ.ಟೆಕ್, ಬಿ. ಆರ್ಚ್, ಎಂ.ಟೆಕ್)
-ಫಿಸಿಯೋಥೆರಪಿ, ಪ್ಯಾರ ಮೆಡಿಕಲ್ (ಎಂ.ಬಿ.ಬಿ.ಎಸ್.) ಮತ್ತು ಡೆಂಟಲ್ ( ಬಿ.ಡಿ.ಎಸ್.)
-ನ್ಯಾಚುರೋಪತಿ

ಆಸಕ್ತ ಅರ್ಹ ವಿದ್ಯಾರ್ಥಿಗಳು ಎ-4 ಹಾಳೆಯಲ್ಲಿ ಅರ್ಜಿ ಬರೆದು, ಸಂಪರ್ಕ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನಮೂದಿಸಿ, ರೇಶನ್ ಕಾರ್ಡ್‌ನ ಪ್ರತಿ, ಹಿಂದಿನ ಪರೀಕ್ಷೆಯ ಅಂಕಪಟ್ಟಿ ಪ್ರತಿ, ಈ ವರ್ಷ ವ್ಯಾಸಂಗ ಮಾಡುತ್ತಿರುವ ದಾಖಲೆ, ಟ್ರಸ್ಟ್ ಪೋಷಕರ/ ಸಮಾಜದ ದೇವಸ್ಥಾನದ ಮೊಕ್ತೇಸರರ ದೃಡೀಕರಣ (ಸೀಲು) ನೊಂದಿಗೆ ಅ. 25 ರಿಂದ ನ. 15 ರೊಳಗೆ ಅರ್ಜಿ ತಲುಪುವಂತೆ ಉಡುಪಿ ಜಿಲ್ಲಾ ಶ್ರೀ ವಿಶ್ವಕರ್ಮ ಎಜ್ಯುಕೇಶನ್ ಟ್ರಸ್ಟ್ (ರಿ.) ಗಾಯತ್ರಿ ಕಲ್ಯಾಣ ಮಂಟಪ, ಕುಂಜಿಬೆಟ್ಟು, ಉಡುಪಿ -576 102, ದೂರವಾಣಿ : 9448748397, 9945542549 ವಿಳಾಸಕ್ಕೆ ಅಂಚೆಯಲ್ಲಿ ಕಳುಹಿಸಬೇಕು.
ನ. 26 ರಂದು ಬೆಳಿಗ್ಗೆ 9-30 ರೊಳಗೆ ಮೊದಲು ಮೂಲ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದವರು ಕಡ್ಡಾಯವಾಗಿ ಗಾಯತ್ರಿ ಕಲ್ಲಾಣ ಮಂಟಪದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅದೇ ದಿನ ವಿದ್ಯಾರ್ಥಿ ವೇತನ ನೀಡಿಕೆ ಪತ್ರ ನೀಡಲಾಗುವುದು. ನ. 28 ರಂದು ವಿದ್ಯಾರ್ಥಿ ವೇತನ ವಿತರಿಸಲಾಗುತ್ತದೆ ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎ. ಆಚಾರ್ಯ ಮಣಿಪಾಲ, ಕಾರ್ಯದರ್ಶಿ ಉಷಾ ಬಿ. ಆಚಾರ್ಯ ಹಾಗೂ ಕೋಶಾಧಿಕಾರಿ ಭಾಸ್ಕರ್ ಆಚಾರ್ಯ ಕುರ್ಕಾಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.































