ತಾಲೂಕಿನೆಲ್ಲೆಡೆ ಗಾಂಧಿ ಜಯಂತಿ ಮತ್ತು ಲಾಲ್‌ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ

ಕಾರ್ಕಳ : ತಾಲೂಕು ಕಚೇರಿ, ಸರಕಾರಿ ಕಚೇರಿ, ಶಾಲಾ- ಕಾಲೇಜುಗಳು, ಸಂಘ ಸಂಸ್ಥೆಗಳು ಸೇರಿದಂತೆ ತಾಲೂಕಿನೆಲ್ಲೆಡೆ ಗಾಂಧಿ ಜಯಂತಿ ಮತ್ತು ಲಾಲ್‌ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮ ಜರುಗಿತು.

ತಾಲೂಕು ಕಚೇರಿಯಲ್ಲಿ ಗಾಂಧಿ ಜಯಂತಿ

ತಾಲೂಕು ಕಚೇರಿಯಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರ ಜನ್ಮ ಜಯಂತಿ ಕಾರ್ಯಕ್ರಮ ಜರುಗಿತು. ಈ ಸಂದರ್ಭ ತಹಶೀಲ್ದಾರ್‌ ಅನಂತಶಂಕರ ಬಿ., ಉಪತಹಶೀಲ್ದಾರರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ತಾಲೂಕು ಕಚೇರಿ ಸಿಬ್ಬಂದಿ ವರ್ಗ ಹಾಗೂ ಪೊಲೀಸ್‌ ಸಿಬ್ಬಂದಿ ಉಪಸ್ಥಿತರಿದ್ದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಗುಪ್ಪೆ ಮಿಯ್ಯಾರು

ಕಾರ್ಕಳ : ಗಾಂಧಿ ಜಯಂತಿ ಆಚರಣೆಯನ್ನು ದೀಪ ಬೆಳಗಿಸುವುದರ ಮೂಲಕ ಶಾಲೆಯ ಸ್ಥಾಪಕ ದಾನಿಗಳು, ಇಸ್ರೋ ನಿವೃತ್ತ ವಿಜ್ಞಾನಿಗಳು ಆಗಿರುವ ಜನಾರ್ಧನ್ ರಾವ್ ಇವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗಾಂಧೀಜಿಯವರು ದೇಶಕ್ಕಾಗಿ ಮಾಡಿದ ಸಮರ್ಪಣೆ ಮತ್ತು ಅವರ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್. ಡಿ. ಎಂ.ಸಿ ಅಧ್ಯಕ್ಷ ವಿಜಯ ಶೆಟ್ಟಿ ವಹಿಸಿದ್ದರು. ನಿವೃತ್ತ ಶಿಕ್ಷಕಿ ಗ್ರೇಸ್ ಹೆಚ್. ವಜ್ರಾವತಿ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ಸ್ವಚ್ಛತೆಯೇ ಸೇವೆಗಾಗಿ ಕಾರ್ಯಕ್ರಮದಲ್ಲಿ ನಡೆದ ಚಟುವಟಿಕೆಗಳಾದ ಪ್ರಬಂಧ, ಭಾಷಣ ಚಿತ್ರಕಲೆ ಮತ್ತು ಕಸದಿಂದ ರಸ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ದೀಪ್ತಿ ದಿನೇಶ್, ಸದಸ್ಯರು, ಪೋಷಕರು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಮನೋಹರ್ ಪ್ರಸ್ತಾವನೆಗೈದು, ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕಿ ಸುನಂದಾ ನಿರೂಪಿಸಿ ವಂದನಾರ್ಪಣೆಗೈದರು.

ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ –ಶಾಸ್ತ್ರಿ ಜನ್ಮದಿನಾಚರಣೆ

ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಅಭಿಯಾನ ಆಂದೋಲನದಡಿಯಲ್ಲಿ ಶಾಲಾ ಆವರಣದ ಸ್ವಚ್ಛತಾ ಕಾರ್ಯ ನಡೆಯಿತು. ಶಾಲಾ ಆಡಳಿತಾಧಿಕಾರಿ ಪೂನಂ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಎಲ್ಲರನ್ನು ಗೌರವಿಸುತ್ತ, ಸತ್ಯ ಮತ್ತು ಅಹಿಂಸೆಯ ತತ್ವವನ್ನು ಪಾಲಿಸಿ ಬಾಳಬೇಕು ಎಂದರು. ಶಾಲಾ ಅಧ್ಯಕ್ಷ ಜೇಸಿ ಚಿತ್ತರಂಜನ್ ಶೆಟ್ಟಿ, ಮುಖ್ಯ ಶಿಕ್ಷಕಿ ಸುರೇಖಾ ರಾಜ್ ಹಾಗೂ ಶಿಕ್ಷಕಿ ರೀಟಾ ಉಪಸ್ಥಿತರಿದ್ದರು.

ಮಾಳ ಶ್ರೀ ಗುರುಕುಲ ಅನುದಾನಿತ ಶಾಲೆಯಲ್ಲಿ ಗಾಂಧೀಜಿ ಮತ್ತು ಶಾಸ್ತ್ರಿಯವರ ಜನ್ಮ ಜಯಂತಿ

ಮಾಳ ಶ್ರೀ ಗುರುಕುಲ ಅನುದಾನಿತ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ, ಭಜನಾ ಕಾರ್ಯಕ್ರಮ ಹಾಗೂ ಭಗವದ್ಗೀತೆ ಪಠಣ ನಡೆಯಿತು. ಈ ಸಂದರ್ಭ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಗಜಾನನ ಮರಾಠೆ, ಸಂಚಾಲಕ ಸುಧಾಕರ್ ಡೋಂಗ್ರೆ, ಕಾರ್ಯದರ್ಶಿ ಗೀತ ಹಾಗೂ ವಿದ್ಯಾರ್ಥಿಗಳು ಗಾಂಧೀಜಿ ಮತ್ತು ಶಾಸ್ತ್ರಿಯವರ ಕುರಿತು ಮಾತನಾಡಿದರು.

ಗಾಂಧೀಜಿ ಮತ್ತು ಶಾ‌ಸ್ತ್ರಿಯವರ ಜೀವನವೇ ಒಂದು ಆದರ್ಶ : ದೇವದಾಸ್ ಕೆರೆಮನೆ

ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ವಿಚಾರಧಾರೆಗಳನ್ನು ನಾವು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧರ್ಮ, ಸತ್ಯ, ಅಹಿಂಸೆಯ ಮೂಲಕ ಅವರು ಪ್ರತಿಪಾದಿಸಿದ್ದು ವಿಶ್ವಮಾನ್ಯ ತತ್ವವನ್ನು. ಅವರ ಜೀವನವೇ ಒಂದು ಆದರ್ಶ ಎಂದು ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ದೇವದಾಸ್ ಕೆರೆಮನೆ ಹೇಳಿದರು. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಇಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸ್ವಂತಕ್ಕಾಗಿ, ಸ್ವಾರ್ಥಕ್ಕಾಗಿ ಬದುಕಿದವರನ್ನು ಜಗತ್ತು ಸ್ಮರಿಸುವುದಿಲ್ಲ. ಸಮಾಜಕ್ಕಾಗಿ, ಸಮಾಜದ ಏಳಿಗೆಗಾಗಿ, ನಿಸ್ವಾರ್ಥದಿಂದ ಬದುಕಿದವರನ್ನು ಜಗತ್ತು ಕೊಂಡಾಡುತ್ತದೆ. ತ್ಯಾಗವೇ ನಾಯಕತ್ವದ ಅಡಿಗಲ್ಲಾಗಿದೆ. ಹಾಗಾಗಿ ಶ್ರೇಷ್ಠ ನಾಯಕರ ಜೀವನವೇ ಒಂದು ಆದರ್ಶ ಎಂದರು. ಸಹ ಶಿಕ್ಷಕಿಯರಾದ ಶಶಿಕಲಾ, ಮಧುಶ್ರೀ, ಶ್ರೇಯಾ, ಅಶ್ವಿನಿ, ಅನಿತಾ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಪ್ರತಿಮಾ ಎಸ್. ಕಾರ್ಯಕ್ರಮ ನಿರ್ವಹಿಸಿದರು.

ಕೋಟಿ ಚೆನ್ನಯ ಥೀಮ್‌ ಪಾರ್ಕ್‌ನಲ್ಲಿ ಗಾಂಧೀಜಿ ಮತ್ತು ಶಾಸ್ತ್ರಿಯವರ ಜನ್ಮ ದಿನಾಚರಣೆ

ಗಾಂಧಿ ಜಯಂತಿ ಮತ್ತು ಲಾಲ್‌ ಬಹುದ್ದೂರ್‌ ಶಾಸ್ತ್ರಿಯವರ ಜನ್ಮ ದಿನಾಚರಣೆ ಪ್ರಯುಕ್ತ ಕೋಟಿ ಚೆನ್ನಯ ಥೀಮ್ ಪಾರ್ಕ್‌ನಲ್ಲಿ ದೀಪ ಬೆಳಗಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ‌ ಥೀಮ್‌ ಪಾರ್ಕ್‌ನ ಸಿಬ್ಬಂದಿ ಅಭಿಲಾಷ್ ಕೋಟ್ಯಾನ್ , ಗೈಡ್ ಸುರೇಂದ್ರ ಪೂಜಾರಿ, ಇಂಜಿನಿಯರ್ ಸುಮನ್ ಹಾಗೂ ಕಾರ್ಕಳ ಯೂತ್ ಬಿಲ್ಲವ ಸಂಘಟನೆಯ ಉಪಾಧ್ಯಕ್ಷ ರವಿರಾಜ್ ಪೂಜಾರಿ ಮತ್ತು ಪ್ರವಾಸಿಗರು ಉಪಸ್ಥಿತರಿದ್ದರು.

ಮಾರುತಿ ಮೋಟಾರ್ಸ್‌ನರಿಂದ ಶ್ರಮದಾನ

ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ತೆಳ್ಳಾರು ರಸ್ತೆಯಲ್ಲಿರುವ ಕಾರ್ಕಳ ಮೋಟರ್ಸ್ ಮಾರುತಿ ಅಧಿಕೃತ ಸೇವಾ ಕೇಂದ್ರದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕೇಂದ್ರದ ಸುತ್ತಲಿನ ಪರಿಸರದಲ್ಲಿ ಹಾಗೂ ರಸ್ತೆ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ವಾಹನ ದುರಸ್ತಿ ವಿಭಾಗದ ಹರೀಶ್ಚಂದ್ರ ಆಚಾರ್ಯ, ಶರತ್ ಸುವರ್ಣ, ರಾಘವೇಂದ್ರ ಪೂಜಾರಿ, ಧನುಷ್, ಗಣದೀಪ, ಪವನ್ ಆಚಾರ್ಯ ಹಾಗೂ ಆದರ್ಶ್ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಸಾಣೂರು ಯುವಕ ಮಂಡಲದವರಿಂದ ಸ್ವಚ್ಛತಾ ಕಾರ್ಯ

ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಉಡುಪಿ ನೆಹರು ಯುವ ಕೇಂದ್ರ, ಸಾಣೂರು ಯುವಕ ಮಂಡಲದ ನೇತೃತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಹಿ ಸೇವಾ ಬೃಹತ್ ಸ್ವಚ್ಛತಾ ಆಂದೋಲನ ಪುಲ್ಕೇರಿ ಬೈಪಾಸ್ ನಿಂದ ಮಠದಕೆರೆ ದೇವಸ್ಥಾನದವರೆಗೆ ನಡೆಯಿತು. ಈ ಸ್ವಚ್ಛತಾ ಆಂದೋಲನದಲ್ಲಿ ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ, ಕಾರ್ಯದರ್ಶಿ ಮೋಹನ್ ಶೆಟ್ಟಿ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ರಾಜೇಶ್, ಜೊತೆ ಕಾರ್ಯದರ್ಶಿಗಳಾದ ಪ್ರಮಿತ್ ಸುವರ್ಣ, ಪ್ರಕಾಶ್ ರಾವ್, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಹಾಸ್ ಪೂಜಾರಿ, ಮಾಜಿ ಅಧ್ಯಕ್ಷರಾದ ದೇವಾನಂದ್ ಶೆಟ್ಟಿ, ಜಗದೀಶ್ ಕುಮಾರ್, ಶಂಕರ್ ಶೆಟ್ಟಿ ಕೊಲ್ಡ್ರೋಟ್ಟು, ಪದಾಧಿಕಾರಿಗಳಾದ ಮುರಳಿ ಸುವರ್ಣ, ಸುದರ್ಶನ್ ನಾಯ್ಕ್, ಸತೀಶ್ ಮಡಿವಾಳ, ಪ್ರಸನ್ನ ಆಚಾರ್ಯ, ಜಯ ಶೆಟ್ಟಿಗಾರ್, ವಿದ್ಯಾನಂದ್ ಕೋಟ್ಯಾನ್, ರಮೇಶ್ ಪೂಜಾರಿ,ಅಬ್ದುಲ್ ಗಫುರ್,ಸುಮುಕ್ ನಾಯಕ್, ದಿನೇಶ್ ಶೆಟ್ಟಿಗಾರ್, ಸುನೀಲ್, ಅಬ್ದುಲ್ಲ ಪಾಲ್ಗೊಂಡಿದ್ದರು.

ಬಜಗೋಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್‌ ಬಹದ್ದೂರು ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯರು, ಬೋಧಕವೃಂದದವರು ಉಪಸ್ಥತರಿದ್ದರು.















































































error: Content is protected !!
Scroll to Top