2,000 ರೂ. ನೋಟು ವಿನಿಮಯಕ್ಕೆ ಮೂರೇ ದಿನ ಬಾಕಿ

ಈಗಾಗಲೇ ಶೇ.93ರಷ್ಟು ನೋಟ್‌ ಬ್ಯಾಂಕ್‌ಗೆ ವಾಪಸ್‌

ಹೊಸದಿಲ್ಲಿ : ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗೆ ಹಿಂದಿರುಗಿಸಲು ನೀಡಿದ್ದ ಸೆ.30ರ ಗಡುವಿಗೆ ಇನ್ನು 3 ದಿನ ಮಾತ್ರ ಬಾಕಿ ಉಳಿದಿದೆ. ಗಡುವು ಮುಗಿದ ಬಳಿಕವೂ ನೋಟುಗಳನ್ನು ಹಿಂದಿರುಗಿಸಲು ಸಾಧ್ಯವಾಗದಿದ್ದರೆ ಏನು ಮಾಡಬೇಕೆಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಅ.1ರಂದು ಆರ್‌ಬಿಐ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಗಡುವು ವಿಸ್ತರಿಸದೆ ನೋಟು ಅಮಾನ್ಯ ಮಾಡಬಹುದು ಎನ್ನಲಾಗುತ್ತಿದೆ.
ಕಳೆದ ಮೇ ತಿಂಗಳಲ್ಲಿ 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಳ್ಳಲಾಗಿತ್ತು. ಈಗಾಗಲೇ ಶೇ.93ರಷ್ಟು ನೋಟುಗಳು ಬ್ಯಾಂಕಿಗೆ ವಾಪಸಾಗಿವೆ. ಹೀಗಾಗಿ ಜನರು ಗಡುವು ಸಮೀಪಿಸುತ್ತಿದ್ದರೂ ಗಾಬರಿಯಾಗಿಲ್ಲ. ಆರ್‌ಬಿಐ ಕೂಡ ಗಡುವು ವಿಸ್ತರಿಸುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಈಗಾಗಲೇ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರೂ. ಮೌಲ್ಯದ ಶೇ.93ರಷ್ಟು 2,000 ರೂ. ನೋಟುಗಳು ಬ್ಯಾಂಕುಗಳಿಗೆ ಮರಳಿವೆ. ಹೀಗಾಗಿ ನೋಟು ಹಿಂದಿರುಗಿಸಲು ನೀಡಿರುವ ಗಡುವನ್ನು ವಿಸ್ತರಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಸೆ.30ರವರೆಗೆ ಜನರು ತಮ್ಮಲ್ಲಿರುವ 2,000 ಮುಖಬೆಲೆಯ ನೋಟುಗಳನ್ನು ಯಾವುದೇ ಬ್ಯಾಂಕುಗಳಲ್ಲಿ ನೀಡಿ ಇತರ ನೋಟುಗಳಿಂದ ಬದಲಾಯಿಸಿಕೊಳ್ಳಬಹುದು ಅಥವಾ ತಮ್ಮ ಬ್ಯಾಂಕ್‌ ಖಾತೆಯಲ್ಲಿ ಠೇವಣಿ ಮಾಡಬಹುದಾಗಿದೆ.error: Content is protected !!
Scroll to Top