10.46 ಲ. ರೂ. ಲಾಭ – ಶೇ. 10 ಡಿವಿಡೆಂಡ್ ಘೋಷಣೆ
ಕಾರ್ಕಳ : ಹಿರ್ಗಾನ ಮೂರ್ತೆದಾರರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ. 24 ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಮಾತನಾಡಿ, ಆಡಳಿತ ಮಂಡಳಿಯ ಪಾರದರ್ಶಕ ಆಡಳಿತ, ಸಿಬ್ಬಂದಿಯವರ ಕಾರ್ಯದಕ್ಷತೆ ಹಾಗೂ ಸಂಘದ ಸದಸ್ಯರ ಸಹಕಾರದಿಂದ ಸಂಘ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಇನ್ನೊಂದು ಶಾಖೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಯೋಜಿಸಬೇಕಾಗಿದೆ ಎಂದರು.
ಸಂಘದ ಸದಸ್ಯ ಆನಂದ ಪೂಜಾರಿ ಮಾತನಾಡಿ ಸಂಘದ ಸ್ಥಾಪಕ ಅಧ್ಯಕ್ಷರಾದ ದಿ. ಸುಂದರ ಪೂಜಾರಿಯವರ ಶ್ರಮದ ಫಲವಾಗಿ ಸಂಘ ಸಧೃಢವಾಗಿ ಬೆಳೆದು ನಿಂತಿದೆ. ಮುಂದೆಯೂ ನಮ್ಮ ಸಂಘ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಲ್ಲಿ ಹಾಗೂ ಸಂಘದ ಬೆಳವಣಿಗೆಯಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದರು.
ಮುಖ್ಯಕಾರ್ಯನಿರ್ವಣಾಧಿಕಾರಿ ಸಂತೋಷ್ ಆರ್ಥಿಕ ವರ್ಷದ ವರದಿ ಮಂಡಿಸಿ, ಸಂಘವು 50.92 ಲಕ್ಷರೂ. ವ್ಯವಹಾರ ನಡೆಸಿ, ದುಡಿಯುವ ಬಂಡವಾಳ ರೂ. 7.25 ಕೋ.ರೂ. ಹಾಗೂ ರೂ. 10.46 ಲಕ್ಷ ಲಾಭ ಗಳಿಸಿದೆ. ಲಾಭಾಂಶದಲ್ಲಿ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದರು.
ವಿದ್ಯಾರ್ಥಿವೇತನ – ಲಾಭಾಂಶದ ಚೆಕ್ ವಿತರಣೆ
ಸಂಘದ ಸದಸ್ಯರ 28 ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಇದೇ ಸಂದರ್ಭ ಸಂಘದ ವತಿಯಿಂದ ಕಾರ್ಯನಿರ್ವಹಿಸುತ್ತಿರುವ 3 ಸ್ವ ಸಹಾಯ ತಂಡಗಳಿಗೆ 2,20,000 ರೂ. ಮೊತ್ತದ ಲಾಭಾಂಶದ ಚೆಕ್ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷ ಭಾಸ್ಕರ್ ಸಿ. ಕೋಟ್ಯಾನ್, ನಿರ್ದೇಶಕರಾದ ಆನಂದ ಪೂಜಾರಿ, ಬಾಬು ಪೂಜಾರಿ, ಸೋಮಪ್ಪ ಪೂಜಾರಿ, ನಾರಾಯಣ ಪೂಜಾರಿ, ಉದಯ ಪೂಜಾರಿ, ನಾರಾಯಣ ಪೂಜಾರಿ ಹಾಗೂ ಸುಂದರ ಪೂಜಾರಿಯವರು ಉಪಸ್ಥಿತರಿದ್ದರು. ಸಿಬ್ಬಂದಿ ಸುರೇಖಾ ಸ್ವಾಗತಿಸಿ, ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ದೀಪಾ ವಂದಿಸಿದರು.