ಸೆ. 26 : ಕಾರ್ಕಳ- ಹೆಬ್ರಿಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಕಾರ್ಕಳ : 220 ಕೆವಿ ಕೇಮಾರ್‌ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಕಾರ್ಕಳ ಐಬಿ ಮತ್ತು ಕಾರ್ಕಳ ಎಕ್ಸ್ ಪ್ರೆಸ್ ಫೀಡರ್‌ಗಳಲ್ಲಿ ಲೈನ್ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಸೆ. 26 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ 110ಕೆವಿ ಕಾರ್ಕಳ ಉಪಕೇಂದ್ರದಲ್ಲಿ ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 11 ಕೆವಿ ದುರ್ಗಾ, ಕಾರ್ಕಳ ಟೌನ್, ಅಜೆಕಾರು, ಬೈಲೂರ್ ಎಕ್ಸ್ ಪ್ರೆಸ್, ಮುಂಡ್ಲಿ, ಜಾರ್ಕಳ, ಕೆ.ಹೆಚ್.ಬಿ, ಸಿ, ಪದವು ಮತ್ತು ಬಂಡಿಮಠ ಫೀಡರ್‌ಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. ಆದ್ದರಿಂದ ಆನೆಕೆರೆ, ಕುಂಟಲ್ಪಾಡಿ, ಕಾರ್ಕಳ ಟೌನ್, ಎಸ್.ವಿ.ಟಿ, ಕಾಲೇಜು, ತೆಳ್ಳಾರ್‌ ರೋಡ್, ಜೋಡುಕಟ್ಟೆ, ದಾನಶಾಲೆ, ಗುಮ್ಮಟ್ಟಬೆಟ್ಟ , ಜೋಡುರಸ್ತೆ, ಬಂಡೀಮಠ, ಪೆರ್ವಾಜೆ, ಪತ್ತೊಂಜಿಕಟ್ಟೆ, ಮಂಗಿಲಾರು, ಚಿಕ್ಕಾಲ್ ಬೆಟ್ಟು, ಹೆರ್ಮುಂಡೆ, ಅಜೆಕಾರು, ಅಂಡಾರು, ಕಡ್ತಲ, ಕುಕ್ಕುಜೆ, ಶಿರ್ಲಾಲು, ಕಾಡುಹೊಳೆ, ಮುಂಡ್ಲಿ, ತೆಳ್ಳಾರು, ಪಲಾಯಿಬಾಕ್ಯಾರು, ಕಜೆ, ಪೊಲ್ಲಾರು, ಕುಕ್ಕುಂದೂರು, ಅಯ್ಯಪ್ಪನಗರ, ಪಿಲಿಚಂಡಿ ಸ್ಥಾನ, ಗಣಿತನಗರ, ಜಾರ್ಕಳ, ದುರ್ಗಾ, ಮಲೆಬೆಟ್ಟು, ಕಡಂಬಳ, ಬೈಲೂರು, ನೀರೆ, ಕೌಡೂರು, ಕೆ.ಹೆಚ್.ಬಿ. ಕಾಲೋನಿ, ಪದವು, ಕುಂಟಾಡಿ, ಪಳ್ಳಿ, ಆನಂದಿ ಮೈದಾನ, ನಕ್ರೆ ಪೊಸನೊಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/11 ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಪೀಡರ್‌ಗಳಾದ ಮುಂಡ್ಕೂರು, ಬೆಳ್ಮಣ್, ನಂದಳಿಕೆ, ಸೂಡ, ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ, ಈ ಫೀಡರ್‌ಗಳಲ್ಲಿ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಬೆಳ್ಮಣ್, ಬೆಳ್ಮಣ್ ದೇವಸ್ಥಾನ, ಗೋಳಿಕಟ್ಟೆ, ನಂದಳಿಕೆ, ಜಂತ್ರ, ನೀಚಾಲು, ಕೆದಿಂಜೆ, ಮಾವಿನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಮುಂಡ್ಕೂರು, ಕಾಂಜರಕಟ್ಟೆ, ಸಚ್ಚೇರಿಪೇಟೆ, ಮುಲ್ಲಡ್ಕ, ಕೋಡಿಮಾರು, ಸಂಕಲಕರಿಯ, ನಾನಿಲ್ ತಾ‌ರ್, ಜಾರಿಗೆಕಟ್ಟೆ, ಸೂಡ, ಸಕ್ಕೇರಿಬೈಲು, ಕೊರಜೆ, ಸೂಡ ಗರಡಿ, ಪಡುಬೆಟ್ಟು, ಸೂಡ ದೇವಸ್ಥಾನ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಹೆಬ್ರಿಯ ಹಲವೆಡೆ ವಿದ್ಯುತ್‌ ಸ್ಥಗಿತ
3/11 ಕೆವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11ಕೆವಿ ಮುದ್ರಾಡಿ ಫೀಡರಿನಲ್ಲಿ ಮಾರ್ಗನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30 ರವರೆಗೆ ಮುನಿಯಾಲು ಪೇಟೆ, ಮುದೆಲ್ಕಡಿ, ಮುಟ್ಲುಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.error: Content is protected !!
Scroll to Top