ಪುತ್ರಿಯ ಸಂಸಾರ ಉಳಿಸಲು ನಟಿಗೆ ರಜನಿಕಾಂತ್‌ ಧಮ್ಕಿ

ಭಾರಿ ಚರ್ಚೆಯಾಗುತ್ತಿದೆ ಪತ್ರಕರ್ತ ಬಹಿರಂಗಪಡಿಸಿದ ರಹಸ್ಯ

ಚೆನ್ನೈ : ರಜನಿಕಾಂತ್‌ ಪುತ್ರಿ ಐಶ್ವರ್ಯಾ ಮತ್ತು ನಟ ಧನುಷ್‌ ಕೌಟುಂಬಿಕ ಜೀವನದಲ್ಲಿ ಬಿರುಕು ಮೂಡಲು ಕಾರಣವಾದ ನಟಿಯೊಬ್ಬರಿಗೆ ರಜನಿಕಾಂತ್‌ ಸ್ವತಹ ಹೋಗಿ ಧಮಕಿ ಹಾಕಿದ್ದರು ಎಂಬ ವಿಚಾರ ಚಿತ್ರರಂಗದಲ್ಲೀಗ ಭಾರಿ ಚರ್ಚೆಯಾಗುತ್ತಿದೆ.
ಕಳೆದ ವರ್ಷ ಜನವರಿಯಲ್ಲಿ ರಜನಿಕಾಂತ್‌ ಪುತ್ರಿ ಐಶ್ವರ್ಯ ಹಾಗೂ ಅಳಿಯ ಧನುಷ್‌ ತಾವು ಬೇರಾಗುತ್ತಿರುವುದಾಗಿ ಅನೌನ್ಸ್‌ ಮಾಡಿದ್ದರು.18 ವರ್ಷಗಳ ದಾಂಪತ್ಯ ಜೀವನದ ಬಳಿಕ ಇಬ್ಬರೂ ಹೀಗೆ ಡಿವೋರ್ಸ್‌ ಪಡೆಯುತ್ತಿರುವುದಕ್ಕೆ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದರು. ರಜನಿಕಾಂತ್‌ ಹಾಗೂ ಧನುಷ್‌ ಮನೆಯವರು ಇಬ್ಬರನ್ನೂ ಒಂದು ಮಾಡಲು ಮತ್ತೆ ಪ್ರಯತ್ನಿಸುತ್ತಿದ್ದು ಹಿರಿಯರಿಗಾಗಿ ಇಬ್ಬರೂ ಮತ್ತೆ ಒಂದಾಗುತ್ತಾರೆ ಎನ್ನಲಾದರೂ ಇದುವರೆಗೂ ಆ ಸಮಯ ಬಂದಿಲ್ಲ.
ಧನುಷ್‌ ಹಾಗೂ ಐಶ್ವರ್ಯ ನಡುವೆ ಬೇರೆ ನಟಿ ಬಂದಿದ್ದೇ ಡೈವೋರ್ಸ್‌ಗೆ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ತಮಿಳಿನ ಖ್ಯಾತ ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಚೆಯ್ಯಾರು ಬಾಲು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆ ನಟಿ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಧನುಷ್​ ಮತ್ತು ಅಮಲಾ ಆಪ್ತರಾಗಿದ್ದರು. ಈ ವಿಚಾರ ಧನುಷ್​ ಅವರ ಮಾವ ರಜನಿಕಾಂತ್​ಗೆ ತಿಳಿದಿತ್ತು. ಹೀಗಾಗಿ ಅಮಲಾ ಅವರ ಮನೆಗೆ ತೆರಳಿದ ರಜನಿಕಾಂತ್​, ನಟಿಗೆ ವಾರ್ನಿಂಗ್​ ನೀಡಿದ್ದರು ಎಂದು ಸೆಯ್ಯಾರು ಬಾಲು ಮಾಹಿತಿ ಬಹಿರಂಗಪಡಿಸಿದ್ದಾರೆ.
ಧನುಷ್ ಸಂಸಾರಿಯಾಗಿದ್ದು, ಆತನಿಗೆ ಪತ್ನಿ ಮತ್ತು ಮಕ್ಕಳಿದ್ದಾರೆ. ಅತನೊಂದಿಗಿನ ಸಂಬಂಧ ಬಿಟ್ಟುಬಿಡದಿದ್ದರೆ ನನ್ನ ಇನ್ನೊಂದು ಮುಖ ನೋಡಬೇಕಾಗುತ್ತದೆ ಎಂದು ರಜನೀಕಾಂತ್‌ ಅಮಲಾಗೆ ಬೆದರಿಕೆ ಹಾಕಿದ್ದರಂತೆ. ಈ ಘಟನೆಯ ನಂತರ ಅಮಲಾಗೆ ತಮಿಳಿನಲ್ಲಿ ಅವಕಾಶಗಳು ಕಡಿಮೆಯಾದ ಕಾರಣ ಅವರು ಕೇರಳಕ್ಕೆ ಹೋಗಿದ್ದಾರೆ ಎಂದು ಸೆಯ್ಯಾರು ಬಾಲು ಹೇಳಿದ್ದಾರೆ.
ವೇಳಯಿಲ್ಲ ಪಟ್ಟದಾರಿ ಸಿನಿಮಾ ಹಾಗೂ ಅದರ ಸೀಕ್ವೆಲ್‌ನಲ್ಲಿ ಧನುಷ್‌ ಹಾಗೂ ಅಮಲಾ ಪೌಲ್‌ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸುವಾಗ ಇಬ್ಬರ ನಡುವೆ ಸ್ನೇಹ ಉಂಟಾಗಿ ಹತ್ತಿರವಾಗಿದ್ದರು.







































error: Content is protected !!
Scroll to Top