ಭಾರತದ ರನ್‌ ಪರ್ವತ ಏರಲಾಗದೆ ಬಸವಳಿದ ಆಸ್ಟ್ರೇಲಿಯ

ಕಿರುಸರಣಿ 2-0 ಅಂತರದಿಂದ ಭಾರತ ವಶ

ಇಂದೋರ್: ವಿಶ್ವಕಪ್‌ ಕ್ರಿಕೆಟ್‌ ಕೂಟಕ್ಕೂ ಮುನ್ನ ಆಸ್ಟ್ರೇಲಿಯ ವಿರುದ್ಧ ನಡೆದ ಕಿರುಸರಣಿಯನ್ನು ಭಾರತ 2-0 ಅಂತರದಿಂದ ವಶಪಡಿಸಿಕೊಂಡಿದೆ. ನಿನ್ನೆ ಇಂದೋರ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ರನ್‌ಗಳನ್ನು ರಾಶಿ ಹಾಕಿತ್ತು. ಮಳೆಯಿಂದ ಅಡಚಣೆಯುಂಟಾದ ಈ ಪಂದ್ಯವನ್ನು ಭಾರತ 99 ರನ್‌ ಅಂತರದಿಂದ ಗೆದ್ದು ಬೀಗಿದೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದ್ದು, ಭಾರತ 5 ವಿಕೆಟ್‌ಗೆ 399 ರನ್ ಗಳಿಸಿ, ಆಸ್ಟ್ರೇಲಿಯಕ್ಕೆ 400 ರನ್‌ಗಳ ಗುರಿ ನೀಡಿದ್ದರು.
ಭಾರತದ ಪರವಾಗಿ ಶುಭಮನ್‌ ಗಿಲ್ ಮತ್ತು ಶ್ರೇಯಸ್‌ ಅಯ್ಯರ್ ಅದ್ಭುತ ಶತಕ ಹಾಗೂ ನಾಯಕ ಕೆ.ಎಲ್‌.ರಾಹುಲ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಶತಕಾರ್ಧ ಬಾರಿಸಿ ಅಬ್ಬರಿಸಿದರು. ಪರಿಣಾಮ ಆಸ್ಟ್ರೇಲಿಯಾಗೆ 400 ರನ್ ಬೃಹತ್‌ ಗುರಿ ನೀಡಲಾಯಿತು.
ಇದನ್ನು ಚೇಸ್‌ ಮಾಡುವಾಗ ಮಳೆ ಸುರಿದು ಪಂದ್ಯ ನಿಂತಿತು. ಡಕ್‌ವರ್ತ್‌ ಲೂಯಿಸ್‌ ನಿಯಮ ಅನ್ವಯಿಸಿ ಓವರ್‌ ಕಡಿತಗೊಳಿಸಿ 33 ಓವರ್‌ಗಳಲ್ಲಿ 317 ರನ್ ಗುರಿ ನಿಗದಿಪಡಿಸಲಾಗಿತ್ತು. ಆದರೆ ಭಾರತದ ಮಾರಕ ಬೌಲಿಂಗ್‌ಗೆ ತತ್ತರಿಸಿದ ಆಸ್ಟ್ರೇಲಿಯಾ 28.2 ಓವರ್ ಗಳಲ್ಲಿ 217 ರನ್‌ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.error: Content is protected !!
Scroll to Top