ಕನ್ನಡ ಭಾಷಾ ಶಿಕ್ಷಕರಿಗೆ ಉತ್ತಮ ಫಲಿತಾಂಶ ವೃದ್ಧಿ ಪ್ರಶ್ನೆ ಪತ್ರಿಕೆ ತಯಾರಿ ಕಾರ್ಯಾಗಾರ

ಕಾರ್ಕಳ : ತಾಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ಉತ್ತಮ ಫಲಿತಾಂಶ ವೃದ್ಧಿ ಪ್ರಶ್ನೆ ಪತ್ರಿಕೆ ತಯಾರಿ ಕುರಿತು ಒಂದು ದಿನದ ಕಾರ್ಯಾಗಾರ ಸೆ. 16 ರಂದು ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್ ಟಿ. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭವಿಷ್ಯದ ಭಾರತ ನಿರ್ಮಾಣವು ತರಗತಿಯಲ್ಲಿ ರೂಪುಗೊಳ್ಳಲು ಶಿಕ್ಷಕರ ಪಾತ್ರ ಮಹತ್ತರವಾದುದು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಅವರ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವಂತ ಬೋಧನೆ ದೊರೆಯಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹಾಗೂ ಭರವಸೆಯ ಬದುಕಿಗೆ ಪ್ರೇರಣೆಯನ್ನು ಶಿಕ್ಷಕರು ನೀಡುವಂತಾಗಬೇಕು ಎಂದರು.

ಪೆರ್ವಾಜೆ ಪ್ರೌಢಶಾಲಾ ಮುಖ್ಯ ಶಿಕ್ಷಕಿ ವೇದಾವತಿ, ಸಂಪನ್ಮೂಲ ಶಿಕ್ಷಕ ಮಂಜುನಾಥ ಕುಲಾಲ್ ಶಿವಪುರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ದೇವದಾಸ್ ಕೆರೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಭಾಷಾ ವಿಷಯ ಸಂಪನ್ಮೂಲ ಶಿಕ್ಷಕ ಕೊಂಡಳ್ಳಿ ಪ್ರಭಾಕರ್‌ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿ, ಸಂಪನ್ಮೂಲ ಶಿಕ್ಷಕ ಗಣೇಶ್ ಜಾಲ್ಸೂರು ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕನ್ನಡ ಭಾಷಾ ವಿಷಯ ಶಿಕ್ಷಕರಿಗೆ ಸಂಪನ್ಮೂಲ ಶಿಕ್ಷಕರು ಉತ್ತಮ ಫಲಿತಾಂಶ ವೃದ್ಧಿ ಪ್ರಶ್ನೆ ಪತ್ರಿಕೆ ತಯಾರಿಯ ಕುರಿತು ಕಾರ್ಯಾಗಾರ ನಡೆಸಿದರು. ತಾಲೂಕಿನ ಕನ್ನಡ ಭಾಷಾ ಬೋಧನಾ ಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

error: Content is protected !!
Scroll to Top