ಮರಳು ಅಕ್ರಮ ಸಾಗಾಟ : ಮೂವರ ಸೆರೆ

ಉಡುಪಿ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟೆಂಪೋವನ್ನು ವಶಪಡಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿರುವ ಘಟನೆ ಉಡುಪಿ ಸಮೀಪ ಮಣಿಪುರದಲ್ಲಿ ಸಂಭವಿಸಿದೆ.
ಕಾಪು ಎಸ್‌ಐ ಅಬ್ದುಲ್‌ ಖಾದರ್‌ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, ಟೆಂಪೋ ಚಾಲಕ ನಝೀರ್‌, ಮಿಥುನ್‌ ಮತ್ತು ಜೀವನ್‌ ಸೆರೆಯಾದವರು.
ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟೆಂಪೋ ಸಹಿತ ಫುಲ್ ಲೋಡ್‌ ಮರಳನ್ನು ಸ್ವಾಧೀನಪಡಿಸಿ ಕೊಂಡಿರುವ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

error: Content is protected !!
Scroll to Top