ನಾಲ್ಕನೇ ದಿನಕ್ಕೆ ಮುಂದುವರಿದ ಅನಂತನಾಗ್‌ ಎನ್‌ಕೌಂಟರ್‌

ಉಗ್ರರ ಪತ್ತೆಗೆ ಡ್ರೋನ್‌ ಬಳಕೆ

ಶ್ರೀನಗರ : ಜಮ್ಮು-ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆಯುತ್ತಿರುವ ಗುಂಡಿನ ಕಾಳಗ ನಾಲ್ಕನೇ ದಿನವೂ ಮುಂದುವರಿದಿದೆ. ಅವಿತಿರುವ ಉಗ್ರರನ್ನು ಪತ್ತೆಹಚ್ಚಲು ಭದ್ರತಾ ಪಡೆ ನಿರಂತರ ಶೋಧ ನಡೆಸುತ್ತಿದೆ. ಕಾರ್ಯಾಚರಣೆಗಾಗಿ ಡ್ರೋನ್‌ಗಳನ್ನು ಬಳಸಲಾಗಿದೆ.
ಕೊನೆಯ ಉಗ್ರನನ್ನು ಸದೆ ಬಡಿದು ನಿರ್ಗಮಿಸುತ್ತೇವೆ ಎಂದು ಸೇನೆಯ ಮುಖ್ಯಸ್ಥರು ಹೇಳಿದ್ದಾರೆ. ಉಗ್ರರ ಗುಂಡಿಗೆ ಮೂವರು ಸೇನಾ ಅಧಿಕಾರಿಗಳು ಮತ್ತು ಓರ್ವ ಪೊಲೀಸ್‌ ಅಧಿಕಾರಿ ಬಲಿಯಾಗಿದ್ದಾರೆ. ಉಗ್ರರ ಕಡೆಯಿಂದಲೂ ಹಲವರು ಸತ್ತಿದ್ದಾರೆ ಎನ್ನುವ ಅನುಮಾನವಿದೆ. ಆದರೆ ಭದ್ರತಾ ಪಡೆಗೆ ಶವಗಳು ಸಿಕ್ಕಿಲ್ಲ.
ಅನಂತನಾಗ್‌ನಲ್ಲಿ ಇನ್ನಷ್ಟು ಉಗ್ರರು ಇರುವ ಕುರಿತು ಖಚಿತ ಮಾಹಿತಿ ಸಿಕ್ಕಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.error: Content is protected !!
Scroll to Top