ಕಾರ್ಕಳದ ಮಹಿಳೆಗೆ ಆನ್‌ಲೈನ್‌ನಲ್ಲಿ 1.26 ಲ.ರೂ. ವಂಚನೆ

ಕಾರ್ಕಳ : ಆನ್‌ಲೈನ್‌ನಲ್ಲಿ ಹಣ ದುಪ್ಪಟ್ಟಾಗುವ ಆಮಿಷಕ್ಕೆ ಬಿದ್ದು ಕಾರ್ಕಳದ ಮಹಿಳೆಯೊಬ್ಬರು 1.26 ಲಕ್ಷ ರೂ. ಕಳೆದುಕೊಂಡಿದ್ದಾರೆ. ಅವರ ಇನ್‌ಸ್ಟಾಗ್ರಾಂ ಖಾತೆಗೆ Group on ಎಂಬ ಕಂಪನಿಯ ಹೆಸರು ಹೇಳಿಕೊಂಡು 500 ರೂ. ವೆಬ್‌ಸೈಟ್‌ಗೆ ಹಾಕಿದರೆ 2000 ರೂ. ವಾಪಾಸು ಕೊಡುವುದಾಗಿ ನಂಬಿಸಲಾಗಿತ್ತು. ಇದನ್ನು ನಂಬಿ ಸೋಹಿನಿ ಮಿಶ್ರ 500 ಹಾಕಿದಾಗ 2000 ರೂ. ಖಾತೆಗೆ ಜಮಾ ಹಾಗಿತ್ತು. ಇದನ್ನು ನಂಬಿ ಮಹಿಳೆ ಇನ್ನಷ್ಟು ಹಣ ಹಾಕಿದ್ದು, ಕ್ರಮೇಣ ಹಾಕುತ್ತಾ 1.26 ಲಕ್ಷ ರೂ. ಕಳೆದುಕೊಂಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.error: Content is protected !!
Scroll to Top