ಚೆನ್ನೈ : ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿದ ಹೇಳಿಕೆ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಮೋದಿ ಸಮುದಾಯದ ಬಗ್ಗೆ ಮಾತನಾಡಿದಂತೆ ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಮಾತನಾಡಿದ್ದಾರೆ. ಈ ಹಿನ್ನೆಲೆ ರಾಹುಲ್ ಗಾಂಧಿ ಉತ್ತರ ಭಾರತದ ಪಪ್ಪು ಆದ್ರೆ, ದಕ್ಷಿಣ ಭಾರತದ ಪಪ್ಪು ಉದಯನಿಧಿ ಸ್ಟಾಲಿನ್ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ರಾಹುಲ್ ಗಾಂಧಿ ಮೋದಿ ಸಮುದಾಯದ ಬಗ್ಗೆ ಮಾತನಾಡಿದಂತೆ ಸನಾತನ ಬಗ್ಗೆ ಉದಯನಿಧಿ ಸ್ಟಾಲಿನ್ ಮಾತನಾಡಿದ್ದಾರೆ. ಈ ಹಿನ್ನೆಲೆ ಉತ್ತರ ಭಾರತದ ಪಪ್ಪು ರಾಹುಲ್ ಗಾಂಧಿ ಆದ್ರೆ, ದಕ್ಷಿಣ ಭಾರತದ ಪಪ್ಪು ಉದಯನಿಧಿ ಎಂದಿದ್ದಾರೆ.
ಅವರು ಹೀಗೆಯೇ ಮಾತನಾಡುತ್ತಾ ಹೋದರೆ ‘I.N.D.I.A’ ಮೈತ್ರಿಕೂಟದ ಮತಬ್ಯಾಂಕ್ ಕುಸಿಯುತ್ತಲೇ ಹೋಗುತ್ತದೆ. ಈಗಲೇ ಈ ಮೈತ್ರಿಕೂಟದ ಮತಗಳ ಪ್ರಮಾಣ ಶೇಕಡಾ ಐದಕ್ಕೆ ಇಳಿದಿದೆ. ಉದಯನಿಧಿ ಹೀಗೆಯೇ ಮುಂದುವರಿದರೆ, ಮೈತ್ರಿಕೂಟದ ಮತಗಳು ಶೇಕಡಾ 20 ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.