ಕಾರ್ಕಳ : ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯ ಬಿಜೆಪಿ ಹಿರಿಯ ಕಾರ್ಯಕರ್ತ ಕರಿಯ ಪೂಜಾರಿ ಅವರು ಸೆ. 3ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಅವರು ಪಕ್ಷದ ಧ್ವಜ ನೀಡಿ ಕರಿಯ ಪೂಜಾರಿ ಹಾಗೂ ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಕರಿಯ ಪೂಜಾರಿ ಅವರು ಕಳೆದ 30 ವರ್ಷಗಳಿಂದ ಪಕ್ಷದ ಕೆಲಸ ಮಾಡುತ್ತ ಬಂದಿರುತ್ತೇನೆ. 4 ಅವಧಿಗೆ ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯನಾಗಿ ಜನಸೇವೆ ಮಾಡಿದ್ದೇನೆ. ಈ ಭಾರಿ ನನಗೆ ಅಧ್ಯಕ್ಷನಾಗುವ ಅವಕಾಶವಿದ್ದರೂ ನನಗೆ ಸುಳ್ಳು ಆಶ್ವಾಸನೆ ನೀಡಿ ಕೋಣೆಯಲ್ಲಿ ಕುಳ್ಳಿರಿಸಿ ಅರ್ಜಿ ಹಾಕುವ ಅವಕಾಶವನ್ನೆ ತಪ್ಪಿಸಿರುತ್ತಾರೆ. ಇದು ನನಗೆ ಮಾಡಿದ ಮೋಸ ಅಲ್ಲ. ಜನಸೇವೆಗೆ ಮಾಡಿದ ಮೋಸ ಎಂದು ದು:ಖ ತೋಡಿ ಕೊಂಡಿರು.
ಕಾಂಗ್ರೆಸ್‌ನತ್ತ ಮುಖ
ಬಿಜೆಪಿಯ ಭ್ರಷ್ಟ, ಸಂವಿಧಾನ ವಿರೋಧಿ ನೀತಿ, ಸ್ವಜನ ಪಕ್ಷಪಾತದಿಂದ ಬೇಸತ್ತು ಅನೇಕರು ಬಿಜೆಪಿ ತೊರೆದು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇವೆ ಎಂದು ಉದಯ ಶೆಟ್ಟಿ ಮುನಿಯಾಲು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಡಿ. ಆರ್. ರಾಜು ಪೂಜಾರಿ, ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಎನ್. ಕೋಟ್ಯಾನ್, ಕೆಪಿಸಿಸಿ ಕೃಷಿ ಘಟಕದ ಕಾರ್ಯದರ್ಶಿ ಉದಯ ವಿ. ಶೆಟ್ಟಿ, ಸುಭೋದ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸದಸ್ಯ, ಹಿಂದುಳಿದ ವರ್ಗಗಳ ಅಧ್ಯಕ್ಷ ಕುಶ ಮೂಲ್ಯ, ಪ್ರಚಾರ ಸಮಿತಿ ಅಧ್ಯಕ್ಷ ಸುಪ್ರಿತ್ ಶೆಟ್ಟಿ ಕೆದಿಂಜೆ, ಮುಂಡ್ಕೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀಧರ ಸನಿಲ್, ಮಾಜಿ ಉಪಾಧ್ಯಕ್ಷ ಸುರೇಂದ್ರ ಶೆಟ್ಟಿ, ಮಾಜಿ ಸದಸ್ಯ ಕೃಷ್ಣ ಪೂಜಾರಿ, ತಾ.ಪಂ. ಮಾಜಿ ಸದಸ್ಯ ಸುಧಾಕರ ಶೆಟ್ಟಿ, ಸುಬಿತ್ ಕುಮಾರ್, ಸುನಿಲ್ ಕೋಟ್ಯಾನ್, ಜೋಕಿಮ್ ಪಿಂಟೋ, ಚಂದ್ರರಾಜ್ ಅತಿಕಾರಿ, ಸುನಿಲ್ ಭಂಡಾರಿ, ಶೋಭಾ, ಆಶಾ, ಯಶೋದಾ, ದೀಪಕ್ ಶೆಟ್ಟಿ, ಸಂದೀಪ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ತಲೀನೋ ಕಾರ್ಯಕ್ರಮ ನಿರ್ವಹಿಸಿ, ನವೀನ್ ದೇವಾಡಿಗ ವಂದಿಸಿದರು.
