ಮಲ್ಪೆ : ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

ಉಡುಪಿ : ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ದೋಣಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಮಲ್ಪೆ ಮೀನುಗಾರಿಕಾ ಬಂದರಿನಿಂದ ಎರಡು ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಸಂಭವಿಸಿದೆ.
ಜಾರ್ಖಂಡ್ ಮೂಲದ ಮನೋಜ್ ಸಾನ್ (32) ಮೃತ ವ್ಯಕ್ತಿ. ಮೀನು ಹಿಡಿಯುತ್ತಿದ್ದಾಗ ಮನೋಜ್ ಸಮುದ್ರಕ್ಕೆ ಬಿದ್ದಿದ್ದು, ಮನೋಜ್ ಜತೆಗೆ ಬೋಟ್ ನಲ್ಲಿದ್ದ ಕೀರ್ತನ್ ತಕ್ಷಣ ಸಮುದ್ರಕ್ಕೆ ಧುಮುಕಿ ಮನೋಜ್‌ರನ್ನು ಮೇಲಕ್ಕೆತ್ತಿದ್ದಾರೆ. ಆದರೆ ಬಿದ್ದ ರಭಸಕ್ಕೆ ಮನೋಜ್ ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















































































error: Content is protected !!
Scroll to Top