ಎಸ್ಎನ್‌ವಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಕಾರ್ಕಳ : ಎಸ್ಎನ್‌ವಿ ಪದವಿ ಪೂರ್ವ ಕಾಲೇಜು, ಜೇಸಿಐ ಕಾರ್ಕಳ ರೂರಲ್ ಹಾಗೂ ನಗರ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ಸೆ. 1 ರಂದು ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಜರುಗಿತು.
ಜೇಸಿಐ ಕಾರ್ಕಳ ರೂರಲ್‌ನ ಅಧ್ಯಕ್ಷ ಮಂಜುನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾರ್ಕಳ ನಗರ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸಂತೋಷ್ ಹಾಗೂ ಕಾನ್ಸ್ಟೇಬಲ್ ಸಂಪಾ ಶೆಟ್ಟಿ ವಿದ್ಯಾರ್ಥಿಗಳಿಗೆ ಕಾನೂನಿನ ಕುರಿತು ಮಾಹಿತಿ ನೀಡಿದರು. ಕಾಲೇಜು ಪ್ರಾಂಶುಪಾಲ ಪ್ರದೀಪ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ಕಾರ್ಕಳ ರೂರಲ್‌ನ ಪೂರ್ವಾಧ್ಯಕ್ಷೆ ವೀಣಾ ರಾಜೇಶ್, ಜೇಸಿಐ ಕಾರ್ಕಳದ ಪೂರ್ವ ವಲಯಾಧಿಕಾರಿ ಮೋಹನ್ ನಕ್ರೆ ಉಪಸ್ಥಿತರಿದ್ದರು. ಉಪನ್ಯಾಸಕ ಅನಿಲ್ ಕಾರ್ಯಕ್ರಮ ನಿರ್ವಹಿಸಿದರು.error: Content is protected !!
Scroll to Top