ವಿದ್ಯಾರ್ಥಿಗೆ ಪಾಕಿಸ್ಥಾನಕ್ಕೆ ಹೋಗು ಎಂದ ಶಿಕ್ಷಕಿ ವಿರುದ್ಧ ಕ್ರಮ

ಶಿವಮೊಗ್ಗ : ಮುಸ್ಲಿಂ ವಿದ್ಯಾರ್ಥಿಗೆ ಸಿಟ್ಟಿನಲ್ಲಿ ಪಾಕಿಸ್ಥಾನಕ್ಕೆ ಹೋಗು ಎಂದು ಹೇಳಿದ್ದಾರೆ ಎನ್ನಲಾದ ಶಿವಮೊಗ್ಗದ ಸರಕಾರಿ ಶಾಲೆಯ ಶಿಕ್ಷಕಿಯೊಬ್ಬರನ್ನು ವರ್ಗಾಯಿಸಿ ಅವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ.
ಶಿಕ್ಷಕಿ ಮಂಜುಳಾ ದೇವಿ ಜತೆಗೆ ವಿದ್ಯಾರ್ಥಿಗಳು ವಾಕ್ಸಮರ ನಡೆಸಿದಾಗ ಶಿಕ್ಷಕಿ ಸಿಟ್ಟಿನಲ್ಲಿ ಪಾಕಿಸ್ಥಾನಕ್ಕೆ ಹೋಗು ಎಂದಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಕುರಿತು ವಿದ್ಯಾರ್ಥಿಗಳು ನೀಡಿದ ದೂರಿನನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್‌ ಕ್ರಮ ಕೈಗೊಂಡಿದ್ದಾರೆ. ಆದರೆ ವಿದ್ಯಾರ್ಥಿಗಳು ಯಾವುದೇ ಪುರಾವೆ ಸಲ್ಲಿಸದಿದ್ದರೂ ಶಿಕ್ಷಕಿ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

error: Content is protected !!
Scroll to Top