ಬೆಳುವಾಯಿ : ಬಾವಿಗೆ ಹಾರಿ ಆತ್ಮಹತ್ಯೆ

ಮೂಡುಬಿದಿರೆ : ನಡು ವಯಸ್ಸಿನ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮುಂಜಾನೆ ಬೆಳುವಾಯಿಯಲ್ಲಿ ನಡೆದಿದೆ.
ಬೆಳುವಾಯಿ ಬರಕಲಗುತ್ತು ಮನೆಯ ರಾಮಣ್ಣ ಎಂಬವರ ಪುತ್ರ ಸಂತೋಷ್ ಪೂಜಾರಿ (42) ಆತ್ಮಹತ್ಯೆ ಮಾಡಿಕೊಂಡವರು.
ಸಂತೋಷ್ ಇಂದು ಮುಂಜಾನೆ ಪಕ್ಕದ ಮನೆಯಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದ ಇವರು ಮೂಡುಬಿದಿರೆಯ ಅಂಗಡಿಯಲ್ಲಿ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದರು.
ಹೆಂಡತಿ ಮತ್ತು ಇಬ್ಬರು ಅವಳಿ ಪುತ್ರಿಯರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

















































error: Content is protected !!
Scroll to Top