ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಆರಕ್ಷಕ ಠಾಣೆಯಲ್ಲಿ ರಕ್ಷಾ ಬಂಧನ

ಕಾರ್ಕಳ : ಕಾರ್ಕಳ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಕಾರ್ಕಳ ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿ ಆ. 30 ರಂದು ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಠಾಣೆಯ ಆರಕ್ಷಕರಿಗೆ ಆರತಿ ಬೆಳಗಿ, ರಕ್ಷೆಯನ್ನು ಕಟ್ಟಿ, ಸಿಹಿ ತಿನಿಸನ್ನು ನೀಡಿ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಸಂಭ್ರಮಿಸಿದರು. ಈ ಸಂದರ್ಭ ಕಾರ್ಕಳ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಉಪಾಧ್ಯಕ್ಷರಾದ ಜ್ಯೋತಿ ರಮೇಶ್‌, ಸುಪ್ರಿಯಾ ಶೆಟ್ಟಿ ಮತ್ತು ಪಲ್ಲವಿ ಪ್ರವೀಣ್‌, ಪ್ರಧಾನ ಕಾರ್ಯದರ್ಶಿ ವಿನಯಾ ಡಿ. ಬಂಗೇರ ಹಾಗೂ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









































































































error: Content is protected !!
Scroll to Top