ಬೆಳ್ಮಣ್ ವೃತ್ತಮಟ್ಟದ ಖೋ ಖೋ ಪಂದ್ಯ : ಕಲ್ಯಾ ಶಾಲೆ ಪ್ರಥಮ

ಬಾಲಕ-ಬಾಲಕಿಯರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

ಕಾರ್ಕಳ : ಬೆಳ್ಮಣ್‌ ವೃತ್ತಮಟ್ಟದ ಖೋ ಖೋ ಪಂದ್ಯಾಟ ಗುರುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ ಇಲ್ಲಿ ಜರುಗಿತು. ಅತಿಥೇಯ ಕಲ್ಯಾ ಶಾಲೆಯ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.
ಎಸ್‌ಡಿಎಂಸಿ ಅಧ್ಯಕ್ಷೆ ಆಶಾ ಪಿ. ಇವರ ಅಧ್ಯಕ್ಷತೆಯಲ್ಲಿ ಸಭಾ ಸಮಾರಂಭ ನಡೆಯಿತು. ಕಲ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರಿ ಜೀವನ್ ಶೆಟ್ಟಿ , ಸದಸ್ಯೆ ಪ್ರೇಮಾ, ಬಿ.ಆರ್.ಸಿ.ಸಿ.ಯ ಸಂತೋಷ್‌ ಶೆಟ್ಟಿ, ಶಿಕ್ಷಣ ಸಂಯೋಜಕ ಪ್ರಕಾಶ್, ಎಸ್‌ಡಿಎಂಸಿ ನಿಕಟಪೂರ್ವ ಅಧ್ಯಕ್ಷ ಶೇಖರ ಆಚಾರ್ಯ, ಉಪಾಧ್ಯಕ್ಷ ಶಂಕರ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಖಜಾಂಜಿ ಗಣೇಶ್ ಕುಡ್ವ, ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರಕಾಂತ ಡೇಸಾ, ತಾಲೂಕು ಯುವಜನ ಕ್ರೀಡಾಧಿಕಾರಿ ಸಂತೋಷ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ವೀಣಾ ಕಾಮತ್ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಕಸ್ತೂರಿ ಎಸ್.ಸ್ವಾಗತಿಸಿದರು. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರದಾ ಆರ್. ಶೇಟ್‌ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರಮೀಳಾ ವಂದಿಸಿದರು.





























































































error: Content is protected !!
Scroll to Top