ಯೂಟ್ಯೂಬ್‌ ನೋಡಿ ಹೆರಿಗೆ : ಪತಿಯ ದುಸ್ಸಾಹಸಕ್ಕೆ ಪತ್ನಿ ಬಲಿ

ರಕ್ತಸ್ರಾವ ನಿಲ್ಲದೆ ಕೊನೆಯುಸಿರೆಳೆದ ಪತ್ನಿ

ಚೆನ್ನೈ : ಪತಿಯೊಬ್ಬ ಯೂಟ್ಯೂಬ್‌ ನೋಡಿಕೊಂಡು ಪತ್ನಿಗೆ ಹೆರಿಗೆ ಮಾಡಿಸಲು ಹೋಗಿ ತೀವ್ರ ರಕ್ತಸ್ರಾವದಿಂದ ಪತ್ನಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ.
ಪೋಚಂಪಲ್ಲಿ ಸಮೀಪದ ಪುಲಿಯಂಪಟ್ಟಿ ನಿವಾಸಿ (27) ಲೋಗನಾಯಕಿ ಮೃತ ಮಹಿಳೆ. ಲೋಗನಾಯಕಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಪತಿ ಮಾದೇಶ್ ಯೂಟ್ಯೂಬ್‌ ನೋಡಿಕೊಂಡು ಹೆರಿಗೆ ಮಾಡಿಸುವ ದುಸ್ಸಾಹಸಕಿಳಿದಿದ್ದಾನೆ. ಸಹಜ ಹೆರಿಗೆಗೆ ಪ್ರಯತ್ನಿಸಿದ ವೇಳೆ ತೀವ್ರ ರಕ್ತಸ್ರಾವವಾಗಿ ಪತ್ನಿ ಮೃತಪಟ್ಟಿದ್ದಾರೆ.
ಕರುಳು ಬಳ್ಳಿಯನ್ನು ಸರಿಯಾಗಿ ಕತ್ತರಿಸದ ಕಾರಣ ತೀವ್ರ ರಕ್ತಸ್ರಾವ ಉಂಟಾಗಿದೆ. ಆ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಆದರೆ ಆದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.







































error: Content is protected !!
Scroll to Top