ಒಲಿದು ಬಂದ ಅಧ್ಯಕ್ಷ ಸ್ಥಾನವನ್ನೇ ನಿರಾಕರಿಸಿದ ಮಹಿಳೆ

ಇಲ್ಲೊಂದು ಅಚ್ಚರಿಯ ವಿದ್ಯಮಾನ

ಹೆಬ್ರಿ : ರಾಜ್ಯದಾದ್ಯಂತ ಗ್ರಾಮ ಪಂಚಾಯತ್‌ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು, ಇದೀಗ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಅಲಂಕರಿಸಲು ಹಲವೆಡೆ ಭಾರಿ ಪೈಪೋಟಿ, ರಾಜಕೀಯ ತಂತ್ರಗಾರಿಕೆ, ಬಲಾಬಲ ನಡೆಯುತ್ತಿದ್ದರೆ ಇಲ್ಲೊಬ್ಬರು ಮಹಿಳೆ ತನಗೊಲಿದ ಹುದ್ದೆಯನ್ನೇ ನಿರಾಕರಿಸಿದ ಅಪರೂಪದ ವಿದ್ಯಮಾನ ನಡೆದಿದೆ. ಅವರೇ ಹೆಬ್ರಿ ತಾಲೂಕು ನಾಡ್ಪಾಲು ಗ್ರಾ. ಪಂ. ಸದಸ್ಯೆ ಬಿಎಡ್ ಪದವೀಧರೆ ಆಶಾ.

7 ಮಂದಿ ಪಂಚಾಯತ್‌ ಸದಸ್ಯರನ್ನು ಹೊಂದಿರುವ ನಾಡ್ಪಾಲು ಗ್ರಾಮ ಪಂಚಾಯತ್‌ನಲ್ಲಿ ಎಲ್ಲರೂ ಬಿಜೆಪಿ ಬೆಂಬಲಿತ ಸದಸ್ಯರೇ ಇದ್ದಾರೆ. ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆಗೆ ಒಲಿದಿದ್ದು, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ)ಗೆ ಕೆಟಗರಿಗೆ ನಿಗದಿಯಾಗಿತ್ತು. ಪಂಚಾಯತ್‌ ಸದಸ್ಯರ ಪೈಕಿ ಆಶಾ ಅವರು ಓರ್ವರೇ ಅನುಸೂಚಿತ ಜಾತಿಗೆ ಸೇರಿದ ಪರಿಣಾಮ ಅವರಿಗೆ ಅ‍ಧ್ಯಕ್ಷ ಪಟ್ಟ ಖಚಿತವಾಗಿತ್ತು. ಆದರೆ ಆ. 19ರಂದು ಚುನಾವಣಾ ಪ್ರಕ್ರಿಯೆ ನಡೆದಾಗ ಅವರು ನಾಮಪತ್ರ ಸಲ್ಲಿಸದೇ, ಅಧ್ಯಕ್ಷ ಸ್ಥಾನ ತನಗೆ ಬೇಡವೆಂದು ಚುನಾವಣಾಧಿಕಾರಿಗೆ ಪತ್ರ ಸಲ್ಲಿಸಿರುತ್ತಾರೆ. ಉಪಾಧ್ಯಕ್ಷರಾಗಿ ನವೀನ್‌ ಕುಮಾರ್‌ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಚುನಾವಣಾಧಿಕಾರಿಯಾಗಿ ಹೆಬ್ರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಷ್ಣುಮೂರ್ತಿ ಕಾರ್ಯನಿರ್ವಹಿಸಿರುತ್ತಾರೆ.





























































































































error: Content is protected !!
Scroll to Top