ಕಾರ್ಕಳ : ಶಿರ್ಲಾಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ದಯಾನಂದ ನಾಯಕ್ ಮತ್ತು ಉಪಾಧ್ಯಕ್ಷರಾಗಿ ವಂದನಾ ಪೂಜಾರ್ತಿ ಆಯ್ಕೆಯಾಗಿದ್ದಾರೆ. ದಯಾನಂದ ನಾಯಕ್ ಅವರು ಸತತ ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ನಿರ್ದೇಶಕರ ಸ್ಥಾನಕ್ಕೆ ಜು. 30 ರಂದು ಚುನಾವಣೆ ನಡೆದಿದ್ದು, 10 ಮಂದಿ ಕಾಂಗ್ರೆಸ್ ಬೆಂಬಲಿತ ಹಾಗೂ 3 ಮಂದಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದರು. ಅವರಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆ. 7 ರಂದು ಸಂಘದಲ್ಲಿ ನಡೆಯಿತು.
ಈ ಸಂದರ್ಭ ಸಂಘದ ನಿರ್ದೇಶಕರಾದ ಶ್ರೀಧರ್ ಪೂಜಾರಿ, ಸತೀಶ್ ನಾಯಕ್, ಗುಣಕರ ಪೂಜಾರಿ, ಸತೀಶ್ ಕುಮಾರ್, ಸುನಿಲ್ ಪೂಜಾರಿ, ಧರಣೇಂದ್ರ ಜೈನ್, ಸುರೇಖಾ ಸೇರ್ವೆಗಾರ್ ಗೋಪಾಲ ನಾಯ್ಕ್, ಲಲಿತಾ ಪಾಣರ, ಸುಂದರ್ ಪೂಜಾರಿ, ಸುಧೀರ್ ಪೂಜಾರಿ, ಡೈರಿ ಕಾರ್ಯದರ್ಶಿ ಹರೀಶ್ ಶೆಟ್ಟಿ ಹಾಗೂ ರಮೇಶ್ ಪೂಜಾರಿ ಉಪಸ್ಥಿತರಿದ್ದರು.































































