ಕಡ್ತಲ : ಮಿಷನ್‌ ಇಂದ್ರಧನುಷ್‌ 5.0 ಅಭಿಯಾನಕ್ಕೆ ಚಾಲನೆ

ಹೆಬ್ರಿ : ಕಡ್ತಲ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಮಿಷನ್‌ ಇಂದ್ರಧನುಷ್‌ 5.0 ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಆ. 8 ರಂದು ಜರುಗಿತು.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ, ಕಡ್ತಲ ಗ್ರಾ. ಪಂ. ಅಧ್ಯಕ್ಷೆ ಮಾಲತಿ ದಿನೇಶ್‌ ಕುಲಾಲ್‌ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಿಸುವಲ್ಲಿ 5.0 ಲಸಿಕೆ ಪರಿಣಾಮಕಾರಿ. ಮಾರಕ ರೋಗಗಳನ್ನು ತಡೆಗಟ್ಟಲು 5 ವರ್ಷದವರೆಗೆ ಮಗುವಿಗೆ ಕಾಲ ಕಾಲಕ್ಕೆ ತಪ್ಪದೆ ಲಸಿಕೆಯನ್ನು ಹಾಕಿಸಬೇಕು ಎಂದು ಹೇಳಿದರು.

ದೊಂಡೇರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಿಕಾ ಮಾತನಾಡಿ ಲಸಿಕೆ ಕುರಿತಾದ ಮಾಹಿತಿ ನೀಡಿದರು. ಈ ಸಂದರ್ಭ ಆರೋಗ್ಯ ಕೇಂದ್ರ ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತೆ ಉಪಸ್ಥಿತರಿದ್ದರು.

































































error: Content is protected !!
Scroll to Top