ಸಿ.ಎ. ಫೌಂಡೇಶನ್ ಫಲಿತಾಂಶ : ಕ್ರಿಯೇಟಿವ್‌ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಚಾರ್ಟಡ್ ಎಕೌಂಟೆಂಟ್ಸ್ ಆಫ್ ಇಂಡಿಯಾ ರಾಷ್ಟ್ರಮಟ್ಟದಲ್ಲಿ ನಡೆಸುವ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್‌ ಕಾಲೇಜಿನ ಒಂಭತ್ತು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಮುಂದಿನ ಸಿಎ ಇಂಟರ್ ಮಿಡಿಯೆಟ್ ಹಂತಕ್ಕೆ ಅರ್ಹತೆ ಪಡೆದಿದ್ದಾರೆ.

ವಿದ್ಯಾರ್ಥಿಗಳಾದ ಸುದೀಪ್ ಕೆ. (261), ಸುಮಾ (250), ಸುಚಿತಾ ಬಿ. ಸಿ. (223), ಅನಘಾ (219), ಬಿ. ಸಿದ್ದಾರ್ಥ್ ಪೈ (214), ಹೆಗ್ಡೆ ಅನಿರುದ್ಧ ರಮೇಶ್ (210), ಅಭಿಷೇಕ್ ಪಿ. ಎಸ್. (209), ವಿಂದ್ಯಾ ವಿನಯ್ ಹೆಗಡೆ (203), ಎಸ್. ಅನುರಾಜ್ (200) ಅಂಕ ಗಳಿಸಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ವಾಣಿಜ್ಯ ವಿಭಾಗದ ಉಪನ್ಯಾಸಕ ವೃಂದ ಹಾಗೂ ಸಂಯೋಜಕರು ಅಭಿನಂದಿಸಿದ್ದಾರೆ.

































































error: Content is protected !!
Scroll to Top