ಮುಂಡ್ಕೂರು : ಬಿಲ್ಲವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ – ಕುಟುಂಬ ಸಮ್ಮಿಲನ ಮತ್ತು ಆಟಿಡೊಂಜಿ ಕೂಟ

ಕಾರ್ಕಳ : ಮುಂಡ್ಕೂರು, ಮುಲ್ಲಡ್ಕ, ಇನ್ನಾ ಬಿಲ್ಲವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ ನೇತೃತ್ವದಲ್ಲಿ ಕುಟುಂಬ ಸಮ್ಮಿಲನ ಹಾಗೂ ಆಟಿಡೊಂಜಿ ಕೂಟ ಕಾರ್ಯಕ್ರಮ ಆ. 8 ರಂದು ಮುಂಡ್ಕೂರು ಸಫಳಿಗ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೊಸ್ರಾಲ್ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷ ಶ್ರೀಧರ್ ಸನಿಲ್, ಆರೋಗ್ಯದ ದೃಷ್ಟಿಯಿಂದ ಆಟಿ ತಿಂಗಳು ಬಹಳ ವಿಶೇಷವಾದದ್ದು. ಈ ಸಂದರ್ಭ ನಾವು ಸೇವಿಸುವ ಆಹಾರ ವರ್ಷದ ಆರೋಗ್ಯ ವೃದ್ಧಿಸುತ್ತದೆ. ಅಲ್ಲದೆ ಕರಾವಳಿಯಲ್ಲಿ ಆಟಿ ತಿಂಗಳನ್ನು ಧಾರ್ಮಿಕ ಹಾಗೂ ಆರೋಗ್ಯ ದೃಷ್ಠಿಯಿಂದ ವಿಶೇಷ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ ಎಂದರು.

ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋದಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವ ವೇದಿಕೆಯ ಅಧ್ಯಕ್ಷ ಹರೀಶ್ ಪೂಜಾರಿ, ಗೌರವಾಧ್ಯಕ್ಷ ಸುರೇಶ್ ಪೂಜಾರಿ, ಸಂಚಾಲಕ ಉದಯ ಪೂಜಾರಿ, ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಕೋಶಾಧಿಕಾರಿ ಸುಕೇಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ನಿಶಾಂತ್ ತೋಟ ಮನೆ, ಗೌರವ ಸಲಹೆಗಾರರಾದ ಕರಿಯ ಪೂಜಾರಿ, ದಯಾನಂದ ಕೋಟ್ಯಾನ್, ಗ್ರಾ. ಪಂ. ಸದಸ್ಯರಾದ ದೇವಪ್ಪ ಸಪಳಿಗ, ಶಶಿಕಲಾ ಕೃಷ್ಣ ಸಾಲಿಯಾನ್, ಉದ್ಯಮಿ ವಾಸು ಅಂಚನ್ ತೋಟ ಮನೆ, ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಮಲ್ಲಿಕಾ, ಕೋಶಾಧಿಕಾರಿ ರಂಜನಿ, ಗೌರವ ಸಲಹೆಗಾರ್ತಿ ಶಶಿಕಲಾ ಸಂಕಲಕರಿಯ ಉಪಸ್ಥಿತರಿದ್ದರು.

ಮಕ್ಕಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಈ ಸಂದರ್ಭದಲ್ಲಿ ಬಿಲ್ಲವ ಮಹಿಳಾ ವೇದಿಕೆಯ ಸದಸ್ಯರು ತಯಾರಿಸಿ ತಂದಿದ್ದ ಸುಮಾರು 40 ಬಗೆಯ ಆಟಿ ತಿಂಗಳ ವಿಶೇಷ ಆಹಾರ ಪದಾರ್ಥಗಳನ್ನು ಉಣ ಬಡಿಸಲಾಯಿತು.

































































error: Content is protected !!
Scroll to Top