ಜೈಲುಗಳು ಭಯೋತ್ಪಾದನೆ ಟ್ರೈನಿಂಗ್‌ ಕೇಂದ್ರಗಳು : ಕೋಟ ಶ್ರೀನಿವಾಸ ಪೂಜಾರಿ ಆರೋಪ

ಕಾನೂನು-ಸುವ್ಯವಸ್ಥೆ ಪಾಲನೆ ಹದಗೆಟ್ಟಿರುವುದಕ್ಕೆ ಆಕ್ರೋಶ

ಬೆಂಗಳೂರು : ರಾಜ್ಯದ ಜೈಲುಗಳು ಭಯೋತ್ಪಾದನೆಗೆ ಟ್ರೈನಿಂಗ್ ಕೊಡುವ ಕೇಂದ್ರಗಳಾಗಿ ಬದಲಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಹದಗೆಟ್ಟಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅವರು ಹಣ ಕೊಟ್ಟರೆ ಜೈಲುಗಳಲ್ಲಿ ಏನು ವ್ಯವಸ್ಥೆ ಬೇಕಾದರೂ ಸಿಗುತ್ತದೆ. ಅಧಿಕಾರಿಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಕೇವಲ ಬೆಳಗಾವಿಯ ಹಿಂಡಲಗ ಜೈಲಿನಲ್ಲಿ ಮಾತ್ರ ಅಲ್ಲ ರಾಜ್ಯದ ಬಹುತೇಕ ಎಲ್ಲ ಜೈಲಿನಲ್ಲಿ ಇದೇ ವ್ಯವಸ್ಥೆ ಇದೆ. ಬೆಂಗಳೂರಿನ ಜೈಲಿನಲ್ಲಿ ಕುಳಿತು ಉಗ್ರ ಚಟುವಟಿಕೆ ಕೆಲಸ ಮಾಡುತ್ತಾರೆ. ಇದಕ್ಕೆ ಸರಕಾರ ಮತ್ತು ಗೃಹ ಇಲಾಖೆ ನೇರ ಕಾರಣ. ಇದನ್ನ ನಾನು ಖಂಡಿಸುತ್ತೇನೆ ಎಂದಿದ್ದಾರೆ.
ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣ ತನಿಖೆಗೆ ಸರಕಾರ ಎಸ್‌ಐಟಿಗೆ ವಹಿಸಬೇಕು ಎಂದು ಒತ್ತಾಯಿಸರುವ ಅವರು ನಾಳೆ ಮಧ್ಯಾಹ್ನ ರಾಜ್ಯಪಾಲರಿಗೆ ದೂರು ನೀಡುತ್ತಿದ್ದೇವೆ. ಉಡುಪಿ, ಮಂಗಳೂರು ಭಾಗದ ಶಾಸಕರು ರಾಜಭವನಕ್ಕೆ ತೆರಳುತ್ತೇವೆ. ಪ್ರಕರಣವನ್ನು ಸರ್ಕಾರ ಡಿವೈಎಸ್‌ಪಿ ನೇತೃತ್ವದಲ್ಲಿ ತ‌ನಿಖೆ ನಡೆಸ್ತಿದೆ. ಆದರೆ ಅಧಿಕಾರಿಗಳು ಸರಕಾರದ ಮಾತು ಕೇಳಿ ತನಿಖೆ ಮಾಡ್ತಾರೆ. ಹೀಗಾಗಿ ಪ್ರಕರಣವನ್ನು ಎಸ್‌ಐಟಿಗೆ ವಹಿಸಿ ಸೂಕ್ತ ತನಿಖೆ ನಡೆಸಲಿ ಎಂದರು.



















































































error: Content is protected !!
Scroll to Top