ಆರ್ಟಿಐ ಅಡಿ ಕೇಳಿದ ಪ್ರಶ್ನೆಗೆ ಸಿಕ್ಕಿದ ರಾಶಿಗಟ್ಟಲೆ ಪುಟ ಉತ್ತರ
ಇಂದೋರ್: ಆರ್ಟಿಐ ಅಡಿ ಕೇಳಿದ ಪ್ರಶ್ನೆಗೆ ಎಷ್ಟು ಪುಟಗಳಲ್ಲಿ ಉತ್ತರ ಕೊಡಬಹದು. 10-20 ಪುಟಗಳಾದರೆ ಸಾಕು ಎನ್ನಬಹುದು. ಅಂಥ ಗಹನ ಪ್ರಶ್ನೆಯಾಗಿದ್ದರೆ ನೂರೋ 100-200 ಪುಟಗಳಲ್ಲಿ ಉತ್ತರ ಕೊಡಬಹುದು. ಆದರೆ ಮಧ್ಯಪ್ರದೇಶದ ಇಂದೋರ್ನಲ್ಲಿ ಧರ್ಮೇಂದ್ರ ಶುಕ್ಲಾ ಎಂಬವರು ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿ ಆರ್ಟಿಐ ಅಡಿ ಕೇಳಿದ ಪ್ರಶ್ನೆಗೆ ಬರೋಬ್ಬರಿ 40,000 ಪುಟಗಳ ಉತ್ತರ ಸಿಕ್ಕಿದೆ. ಆ ದಾಖಲೆಗಳನ್ನು ಅವರು ದೊಡ್ಡ ಕಾರಿನಲ್ಲಿ ಮನೆಗೆ ಕೊಂಡೊಯ್ದಿದಿದ್ದಾರೆ. ಒಂದು ತಿಂಗಳೊಳಗೆ ಮಾಹಿತಿ ನೀಡದ ಕಾರಣಕ್ಕೆ ಪ್ರತಿ ಪುಟಕ್ಕೆ ನಿಗದಿತ 2 ರೂ. ಧರ್ಮೇಂದ್ರ ಶುಕ್ಲಾ ಅವರು ಪಾವತಿಸಿಲ್ಲ.
ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಔಷಧಗಳು, ಉಪಕರಣಗಳು ಮತ್ತು ಸಂಬಂಧಿತ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದ ಟೆಂಡರ್ಗಳು ಮತ್ತು ಬಿಲ್ ಪಾವತಿಗಳ ವಿವರಗಳನ್ನು ಕೋರಿ ಇಂದೋರ್ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗೆ ಆರ್ಟಿಐ ಅರ್ಜಿ ಹಾಕಿದ್ದರು.
ಒಂದು ತಿಂಗಳೊಳಗೆ ಮಾಹಿತಿ ನೀಡದ ಕಾರಣ, ಮೊದಲ ಮೇಲ್ಮನವಿ ಅಧಿಕಾರಿ ಡಾ. ಶರದ್ ಗುಪ್ತಾ ಅವರನ್ನು ಸಂಪರ್ಕಿಸಿದಾಗ ಅವರು ಮನವಿ ಸ್ವೀಕರಿಸಿ ಉಚಿತವಾಗಿ ಮಾಹಿತಿ ನೀಡುವಂತೆ ಸೂಚಿಸಿದರು. ಆದರೆ ಸಿಕ್ಕಿದ ಉತ್ತರವನ್ನು ಮನೆಗೆ ಒಯ್ಯಲು ಶುಕ್ಲ ಬಹಳ ತ್ರಾಸ ಪಡಬೇಕಾಯಿತು. 40 ಸಾವಿರ ಪುಟಗಳ ಉತ್ತರ ಅವರ ಕಾರಿನ ಡ್ರೈವರ್ ಸೀಟು ಹೊರತುಪಡಿಸಿ ಉಳಿದೆಲ್ಲಾ ಕಡೆ ತುಂಬಿತು.









































