ಮೊಬೈಲ್‌ ಖರೀದಿಸಲು ಮಗುವನ್ನೇ ಮಾರಿದ ದಂಪತಿ

ಮಗು ಮಾರಿ ಸಿಕ್ಕಿದ ಹಣದಲ್ಲಿ ತಿರುಗಾಡಿ ಮೋಜು

ಕೋಲ್ಕತ್ತ : ಹೊಸ ಮೊಬೈಲ್‌ ಫೋನ್‌ ಖರೀದಿಸಲು ತಮ್ಮ 8 ತಿಂಗಳ ಮಗುವನ್ನೇ ಮಾರಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ. ಮಗುವನ್ನು ಮಾರಿ ಹೊಸ ಫೋನ್‌ ಖರೀದಿಸಿದ್ದು ಮಾತ್ರವಲ್ಲದೆ ಈ ದಂಪತಿ ಜಾಲಿಟ್ರಿಪ್‌ ಕೂಡ ಮಾಡಿದ್ದರು. ಅವರ ಕೈಯಲ್ಲಿ ದುಬಾರಿ ಬೆಲೆಯ ಫೋನ್‌ ಕಂಡು ಸಂಶಯಗೊಂಡ ನೆರೆಹೊರೆಯವರು ಗುಸುಗುಸು ಮಾತನಾಡಲು ತೊಡಗಿದಾಗಲೇ ಖತರ್‌ನಾಕ್‌ ದಂಪತಿಯ ಗುಟ್ಟು ಬಯಲಾದದ್ದು.
ದಂಪತಿಗೆ ಓರ್ವ ಪುತ್ರಿಯೂ ಇದ್ದು, 8 ತಿಂಗಳ ಹಿಂದೆ ಜನಿಸಿದ ಗಂಡು ಮಗುವನ್ನು 2 ಲ.ರೂ. ಮಾರಿದ್ದರು. ಇದರಲ್ಲಿ ಒಂದು ಫೋನ್‌ ಖರೀದಿಸಿ ಉಳಿದ ಹಣದಲ್ಲಿ ಪ್ರವಾಸ ಹೋಗಿ ತಿರುಗಾಡಿ ಮೋಜು ಮಾಡಿದ್ದರು. ಒಂದೂವರೆ ತಿಂಗಳ ಹಿಂದೆ ಮಗುವನ್ನು ಮಾರಾಟ ಮಾಡಿದ್ದರೂ ಜು.24ರಂದು ಘಟನೆ ಬೆಳಕಿಗೆ ಬಂದಿದೆ. ಜಯದೇವ್‌ ಘೋಶ್‌ ಮತ್ತು ಸತಿ ಮಗುವನ್ನು ಮಾರಾಟ ಮಾಡಿದ ದಂಪತಿ. ದಂಪತಿಯ ಜತೆಗೆ ಮಗುವನ್ನು ಮಾರಲು ಸಹಕರಿಸಿದ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದಾರೆ. ನೆರೆಹೊರೆಯವರಲ್ಲಿ ಮಗುವನ್ನು ತಾಯಿ ಮನೆಯಲ್ಲಿ ಬಿಟ್ಟಿದ್ದೇನೆ ಎಂದು ಸತಿ ಸುಳ್ಳು ಹೇಳಿದ್ದಳು.











































































error: Content is protected !!
Scroll to Top