ಕಾರ್ಕಳ : ವಿಜ್ ನ್ಯಾಷನಲ್ ವತಿಯಿಂದ ನಡೆದ ಸ್ಪೆಲ್ ಬೀ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಾದ ಹತ್ತನೇ ತರಗತಿಯ ಸುಮುಖ್ ರಾಜ್, ಒಂಭತ್ತನೇ ತರಗತಿಯ ಸಾಚಿ, ಭಗತ್ ಶೆಟ್ಟಿ, ಲಿಖಿತ್ ಡಿ. ಶೆಟ್ಟಿ ಹಾಗೂ ಆರನೇ ತರಗತಿಯ ಸಾನ್ವಿ ಮತ್ತು ಗೌರವ್ ಮಹೇಶ್ ಹೆಗ್ಡೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸ್ಪೆಲ್ ಬೀ ಎಂಬುದು ಶಾಲಾ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಪದಗಳ ಕುರಿತು ನಡೆಸುವ ಸ್ಪರ್ಧೆ. ಕಳೆದ ವರ್ಷ ಶಾಲಾ ಮಟ್ಟ, ಅಂತರ್ ಶಾಲಾ, ಜಿಲ್ಲೆ ಮತ್ತು ರಾಜ್ಯ ಮಟ್ಟದ ಸ್ಪರ್ಧೆ ನಡೆದಿದ್ದು ಇತ್ತೀಚೆಗೆ ಫಲಿತಾಂಶ ಪ್ರಕಟಗೊಂಡಿದೆ. ಆಗಸ್ಟ್ ತಿಂಗಳಲ್ಲಿ ಆನ್ಲೈನ್ನಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆ ನಡೆಯಲಿದೆ.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಸಿ.ಇ.ಒ. ದಿನೇಶ್ ಎಂ. ಕೊಡವೂರು, ಮುಖ್ಯ ಶಿಕ್ಷಕಿ ಉಷಾ ರಾವ್. ಯು. ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.







































