ಆಗಸ್ಟ್‌ 1ರಿಂದ ಹೋಟೆಲ್‌ ತಿಂಡಿ-ಪಾನೀಯ ದುಬಾರಿ

ಬೆಲೆ ಏರಿಸಲು ಹೋಟೆಲ್‌ ಮಾಲಕರ ನಿರ್ಧಾರ

ಬೆಂಗಳೂರು: ಹಾಲಿನ ಬೆಲೆ ಹೆಚ್ಚಾದ ಬೆನ್ನಿಗೆ ಹೋಟೆಲ್‌ಗಳಲ್ಲಿ ತಿಂಡಿ-ಪಾನೀಯಗಳ ಬೆಲೆ ಹೆಚ್ಚಿಸಲು ಹೋಟೆಲ್‌ ಮಾಲಕರು ನಿರ್ಧರಿಸಿದ್ದಾರೆ. ಆಗಸ್ಟ್‌ 1ರಿಂದ ರಾಜ್ಯದ ಹೋಟೆಲ್‌ಗಳಲ್ಲಿ ಊಟ-ತಿಂಡಿ ಬೆಲೆ ಹೆಚ್ಚಾಗಲಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಿರುವುದುರಿಂದ ಕಾಫಿ, ಟೀ, ತಿಂಡಿ ತಿನಿಸುಗಳ ಬೆಲೆ ಹೆಚ್ಚಿಸಲು ಹೋಟೆಲ್‌ ಮಾಲಕರ ಸಂಘ ತೀರ್ಮಾನಿಸಿದೆ. ಈಗಾಗಲೇ ಕೆಲವೆಡೆಗಳಲ್ಲಿ ಹೋಟೆಲ್‌ ಊಟ-ತಿಂಡಿ ದುಬಾರಿಯಾಗಿದೆ. ಆ.1ರಿಂದ ಅಧಿಕೃತವಾಗಿ ಇದು ಜಾರಿಗೆ ಬರಲಿದೆ.
ತಿಂಡಿ-ಊಟ ಜತೆಗೆ ಕಾಫಿ ಟೀ ದರವನ್ನು ಶೇ.10ರಷ್ಟು ಹೆಚ್ಚಳ ಮಾಡಲಾಗುವುದು. ಅನೇಕ ಹೋಟೆಲ್‌ನವರು ಶೇ.20ರಷ್ಟು ಏರಿಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಜು.25ರಂದು ಹೋಟೆಲ್‌ ಮಾಲಕರ ಸಭೆ ಸಂಘದ ನಡೆಯಲಿದ್ದು, ಇದರಲ್ಲಿ ಪರಿಷ್ಕೃತ ದರಪಟ್ಟಿಯನ್ನು ಪ್ರಕಟಿಸಲಾಗುವುದು. ಕಾಫಿ ಮತ್ತು ಟೀ ಬೆಲೆ ಕನಿಷ್ಠ 3ರಿಂದ 5 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ. ತಿಂಡಿ-ಊಟ ಬೆಲೆ ಶೇ.10ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಕರೆಂಟ್, ನೀರು, ಹಾಲು, ತರಕಾರಿ ಎಲ್ಲದರ ಬೆಲೆ ಹೆಚ್ಚಳವಾಗಿ ಜನ ತತ್ತರಿಸುತ್ತಿದ್ದಾರೆ. ಇದೀಗ ಊಟ-ತಿಂಡಿಗೆ ಹೋಟೆಲ್‌ಗಳನ್ನು ಅವಲಂಬಿಸಿರುವವರಿಗೆ ಇನ್ನಷ್ಟು ಹೊರೆ ಬೀಳಲಿದೆ.









































































































error: Content is protected !!
Scroll to Top