ಪೇಟೆ ಧಾರಣೆ : ಬೀನ್ಸ್‌ ದರ ಇಳಿಕೆ – ಹಣ್ಣಿನ ಬೆಲೆ ಏರಿಕೆ

ಕಾರ್ಕಳ : ಮಾರುಕಟ್ಟೆಯಲ್ಲಿ ಬೀನ್ಸ್‌ , ಬೆಂಡೆ ಮತ್ತು ಕೊತ್ತಂಬರಿ ಸೊಪ್ಪು ಬೆಲೆ ಇಳಿಕೆಯಾಗಿದೆ. ಇನ್ನು ಉಳಿದಂತೆ ತರಕಾರಿ ಬೆಲೆ ಯಥಾಸ್ಥಿತಿಯಿದೆ. ಹಣ್ಣುಗಳನ್ನು ಬೇರೆ ಭಾಗಗಳಿಂದ ಆಮದು ಮಾಡಿಕೊಳ್ಳುವುದರಿಂದ ಬೆಲೆಯಲ್ಲಿ ಏರಿಕೆ ಕಂಡಿದೆ. ಮಾಂಸದ ದರದಲ್ಲಿ ಇಳಿಕೆ ಕಂಡಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 50-60 ರೂ., ಮುಳ್ಳುಸೌತೆ : 50-60 ರೂ., ಶುಂಠಿ : 180 -240 ರೂ., ಟೊಮ್ಯಾಟೋ : 100 – 120 ರೂ. , ಚೀನಿಕಾಯಿ : 25 ರೂ., ನೀರುಳ್ಳಿ : 25 – 30 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ : 200 ರೂ., ಸೌತೆ : 20 – 25 ರೂ., ಬೀನ್ಸ್‌ : 70 ರೂ., ಕಾಯಿಮೆಣಸು : 100 -120 ರೂ., ಕ್ಯಾರೆಟ್‌ : 70 ರೂ., ಬೀಟ್ರೋಟ್‌ : 50 ರೂ., ಕ್ಯಾಬೇಜ್‌ : 25 ರೂ., ಹೂಕೋಸು : 50 -60 ರೂ., ನವೀಲು ಕೋಸು : 60-70 ರೂ. ಬೆಂಡೆ : 50 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60 ರೂ., ತೊಂಡೆಕಾಯಿ : 40 ರೂ., ಹಾಗಲಕಾಯಿ : 60- 70 ರೂ., ಗೆಣಸು : 30 ರೂ., ಲಿಂಬೆ : 80 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 100 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 100 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ :‌ 60 ರೂ., ಬಸಳೆ – 60 ರೂ., ಹೀರೆ ಕಾಯಿ : 80 ರೂ., ಘಾಟಿ ಹೀರೆ : 50 – 60 ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 240 – 260 ರೂ., ದಾಳಿಂಬೆ : 180- 200 ರೂ., ಮಾವು : 80 -160 ರೂ., ದ್ರಾಕ್ಷಿ : 120 ರೂ., ಕಲ್ಲಂಗಡಿ : 40-50 ರೂ., ಬಾಳೆ : 60 -80ರೂ., ಕಿತ್ತಳೆ : 140 – 150 ರೂ., ಮೂಸಂಬಿ : 60- 80 ರೂ., ಸೀತಾಫಲ – 120 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 220 ರೂ., ಬಾಯ್ಲರ್‌ : 160 ರೂ. (ಸ್ಕಿನ್‌ ಔಟ್‌ 190 ರೂ.) ಬೆಲೆ ಇದೆ ಎಂದು ಮೇಘಾ ಚಿಕನ್‌ ಸ್ಟಾಲ್‌ ಮಾಲಕ ದಿನೇಶ್‌ ಪೂಜಾರಿ ಹೇಳಿದ್ದಾರೆ.

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7 ರೂ.



















































































error: Content is protected !!
Scroll to Top