ಜು. 24 -31 : ಅಕ್ಯೂಪ್ರೆಶರ್‌ ಮತ್ತು ಸುಜೋಕ್‌ ಥೆರಪಿ ಚಿಕಿತ್ಸಾ ಶಿಬಿರ

ಕಾರ್ಕಳ : ಡಾ. ರಾಮ ಮನೀಹರ್‌ ಲೋಹಿಯಾ ಆರೋಗ್ಯ ಜೀವನ್‌ ಸಂಸ್ತಾನ್‌ ಮತ್ತು ಡಾ. ರಮೇಶ್‌ ಚೌಧರಿ ಅವರ ಸಹಕಾರದೊಂದಿಗೆ ಜು. 24 ರಿಂದ ಜು. 31 ರವರೆಗೆ ನಗರದ ಹಿತೈಷಿ ಶ್ರೀ ಶ್ರೀನಿವಾಸ ಕಲಾ ಮಂದಿರದಲ್ಲಿ ಅಕ್ಯೂಪ್ರೆಶರ್‌ ಮತ್ತು ಸುಜೋಕ್‌ ಥೆರಪಿ ಚಿಕಿತ್ಸಾ ಶಿಬಿರ ನಡೆಯಲಿದೆ. ಪ್ರತಿದಿನ ಬೆಳಗ್ಗೆ 8 ರಿಂದ 12 ಗಂಟೆಯವರೆಗೆ ಮತ್ತು ಸಂಜೆ 3 ರಿಂದ 8 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಆಸಕ್ತರು 8 ದಿನಕ್ಕೆ 200 ರೂ. ಶುಲ್ಕ ಪಾವತಿಸಬೇಕಾಗಿದೆ. ಶಿಬಿರದಲ್ಲಿ ದೇಹದ ಅತಿ ಭಾರ, ಡಯಾಬಿಟೀಸ್‌, ಅರ್ಧ ತಲೆನೋವು, ಕೀಲು ನೋವು, ಸಂಧಿವಾತ, ಪಿತ್ತವಾತ, ಬ್ಲಡ್‌ ಪ್ರೆಶರ್‌, ಬೆನ್ನು ಹುರಿ ನೋವು, ಮೊಣಕಾಲು ನೋವು, ಅಪಚನ, ಮಲಬದ್ಧತೆ, ಹಾಸಿಗೆಯಲ್ಲಿ ಮೂತ್ರ ಮಾಡುವಿಕೆ ಇತ್ಯಾದಿ ಕಾಯಿಲೆಗಳ ನಿವಾರಣೆಗೆ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9741848110 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಆಯೋಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





























































































































error: Content is protected !!
Scroll to Top