ಕಾರ್ಕಳದಲ್ಲಿ ಕೆನರಾ ಬ್ಯಾಂಕ್‌ ಗ್ರಾಹಕರ ಸಮಾವೇಶ

ಕೆನರಾ ಬ್ಯಾಂಕ್‌ ಮೂರನೇ ಅತಿ ದೊಡ್ಡ ಬ್ಯಾಂಕ್‌ – ಎಂ.ಜಿ. ಪಂಡಿತ್

ಕಾರ್ಕಳ : ಗ್ರಾಹಕರ ಬೆಂಬಲದಿಂದಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ ಕೆನರಾ ಬ್ಯಾಂಕ್‌ ದೇಶದಲ್ಲೇ ಮೂರನೇ ಅತಿ ದೊಡ್ಡ ಬ್ಯಾಂಕ್‌ ಆಗಿ ಹೊರಹೊಮ್ಮಿದೆ. ಕಳೆದ ವರ್ಷ ಬ್ಯಾಂಕ್‌ 20.60 ಸಾವಿರ ಕೋಟಿ ರೂ. ವ್ಯವಹಾರ ನಡೆಸಿದ್ದು, 10, 600 ಕೋಟಿ‌ ರೂ. ಲಾಭ ಗಳಿಸಿದೆ ಎಂದು ಕೆನರಾ ಬ್ಯಾಂಕ್‌ ಮಹಾಪ್ರಬಂಧಕ ಎಂ.ಜಿ. ಪಂಡಿತ್‌ ತಿಳಿಸಿದರು.
ಜು. 20ರಂದು ಕಾರ್ಕಳದ ಹೊಟೇಲ್‌ ಕಟೀಲ್‌ ಇಂಟರ್‌ನ್ಯಾಷನಲ್‌ನ ಸಭಾಂಗಣದಲ್ಲಿ ನಡೆದ ಕೆನರಾ ಬ್ಯಾಂಕ್‌ ಗ್ರಾಹಕರ ಸಮಾವೇಶದಲ್ಲಿ ಅವರು ಮಾತನಾಡಿದರು.

ಕೆನರಾ ಬ್ಯಾಂಕ್‌ ಪ್ರಸ್ತುತ ದೇಶದಲ್ಲಿ 9712 ಶಾಖೆಗಳನ್ನು ಹೊಂದಿದೆ. ವಿದೇಶದಲ್ಲೂ 6 ಬ್ರಾಂಚ್‌ಗಳಿವೆ. ಸಿಂಡಿಕೇಟ್‌ ಬ್ಯಾಂಕ್‌ ಕೆನರಾ ಬ್ಯಾಂಕ್‌ ನೊಂದಿಗೆ ವಿಲೀನವಾದ ಬಳಿಕ ಬ್ಯಾಂಕ್‌ ಸದೃಢವಾಗಿ ಬೆಳೆದಿದೆ. ಗ್ರಾಹಕರು ಬಹುತೇಕ ಬ್ಯಾಂಕ್‌ ವ್ಯವಹಾರಗಳನ್ನು ಮೊಬೈಲ್‌ ಬ್ಯಾಂಕಿಂಗ್‌, ಡಿಜಿಟಲ್‌ ಬ್ಯಾಂಕಿಂಗ್‌ ಮೂಲಕವೇ ಮಾಡಬಹುದಾಗಿದೆ. ಕೆನರಾ ಬ್ಯಾಂಕ್‌ ಆರ್ಥಿಕ ಚಟುವಟಿಕೆ ಮಾತ್ರವಲ್ಲದೇ ಸಾಮಾಜಿಕ, ಶೈಕ್ಷಣಿಕ ಕಾರ್ಯದಲ್ಲೂ ತೊಡಗಿಸಿಕೊಂಡು ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ ಎಂದು ಪಂಡಿತ್‌ ಅವರು ತಿಳಿಸಿದರು.

ಸ್ಯಾಲರಿ ಅಕೌಂಟ್‌
ಕೆನರಾ ಬ್ಯಾಂಕ್‌ ನಲ್ಲಿ ಸ್ಯಾಲರಿ ಅಕೌಂಟ್‌ ತೆರೆದಲ್ಲಿ ಉಚಿತ ವಿಮೆ ಸೌಲಭ್ಯವಿದೆ. ಈ ಖಾತೆ ತೆರೆದಲ್ಲಿ ಶೂನ್ಯ ಬ್ಯಾಲೆನ್ಸ್‌ನೊಂದಿಗೆ ಸರ್ವಿಸ್‌ ಚಾರ್ಚ್‌ ಕೂಡ ಇರುವುದಿಲ್ಲ. ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಬಹಳಷ್ಟು ಸೌಲಭ್ಯಗಳನ್ನು ನೀಡಿದ್ದು ಗ್ರಾಹಕರು ಆ ಎಲ್ಲ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ಪಂಡಿತ್‌ ಮನವಿ ಮಾಡಿಕೊಂಡರು. ಸಭೆಯಲ್ಲಿ ಉದ್ಯಮಿಗಳ, ಗ್ರಾಹಕರ ಅಭಿಪ್ರಾಯ, ಸಲಹೆ ಪಡೆಯಲಾಯಿತು.
ಕೆನರಾ ಬ್ಯಾಂಕ್ ನ ಉಪ ಮಹಾಪ್ರಬಂಧಕ ರಾಜೀವ್ ತುಕ್ರಾಲ್, ಸಹಾಯಕ ಮಹಾಪ್ರಬಂಧ ಕೆ. ಶ್ರೀಜಿತ್, ಉದ್ಯಮಿ ಸತೀಶ್‌ ಪೈ, ನಿಟ್ಟೆ ಮಹಾವಿದ್ಯಾಲಯದ ಪ್ರೊಫೆಸರ್ ಕರುಣಾ ಪಂಡಿತ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾದೇಶಿಕ ಕಚೇರಿಯ ಪ್ರಭಾಕರ್‌ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಭಶ್‌ ಕುಮಾರ್‌ ವಂದಿಸಿದರು.





























































































































error: Content is protected !!
Scroll to Top