ಕಾರ್ಕಳ : ಹೆಡ್‌ಕಾನ್‌ಸ್ಟೆಬಲ್ ಎಚ್. ಸಿ. ಪ್ರಶಾಂತ್ ಮಿಯ್ಯಾರು (49) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಿಯ್ಯಾರು ಗ್ರಾಮದ ಕಾಜರಬೈಲು ನಿವಾಸಿಯಾಗಿದ್ದ ಅವರು ಅವಿವಾಹಿತರಾಗಿದ್ದರು. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇದೇ ನೋವಿನಲ್ಲಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೆ ಕಾರ್ಕಳ ನಗರ ಠಾಣೆಯಿಂದ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗವಾಗಿ ಪ್ರಸ್ತುತ ರಜೆಯಲ್ಲಿದ್ದರು. ಮನೆಯ ಹಿಂದೆ ನೇಣು ಹಾಕಿಕೊಂಡಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಅಮ್ಮನನ್ನು ಅಗಲಿದ್ದಾರೆ.
ಕಾರ್ಕಳದ ಹೆಡ್‌ಕಾನ್‌ಸ್ಟೆಬಲ್ ಪ್ರಶಾಂತ್ ಮಿಯ್ಯಾರು ಆತ್ಮಹತ್ಯೆ


























