ಕಾರ್ಕಳ : ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟ ಘಟನೆ ಜು. 14 ರಂದು ನಿಟ್ಟೆ ಗ್ರಾಮದಲ್ಲಿ ಸಂಭವಿಸಿದೆ. ಬಿಹಾರ ಮೂಲದ ಸೌರವ್ ಕುಮಾರ್ (20) ಮೃತ ದುರ್ದೈವಿ. ಕೆಲವು ವರ್ಷಗಳ ಹಿಂದೆ ಕೂಲಿ ಕಾರ್ಮಿಕನಾಗಿ ಬಂದಿದ್ದ ಇವರು ನಿಟ್ಟೆ ಕಾಲೇಜು ಮುಂಭಾಗದಲ್ಲಿರುವ ಕಟ್ಟಡದ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದರು. ಶುಕ್ರವಾರ ಸಂಜೆ ಏನೋ ವಸ್ತು ಕಾಣಿಸುತ್ತಿಲ್ಲವೆಂದು ಹುಡುಕಾಡಲು ಮೇಲಿನ ಮಹಡಿಗೆ ಹೋಗಲು ಏಣಿ ಹತ್ತಿದಾಗ ಏಣಿಗೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ಪರಿಣಾಮವಾಗಿ ಏಣಿ ಹಿಡಿದಿದ್ದ ಸೌರವ್ ಮೃತಪಟ್ಟಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಟ್ಟೆ : ವಿದ್ಯುತ್ ತಂತಿ ಸ್ಪರ್ಶ – ಯುವಕ ಸಾವು

















































