ಜೀವಂತ ಚಿರತೆಯನ್ನು ಬೈಕಿಗೆ ಕಟ್ಟಿ ಅರಣ್ಯ ಇಲಾಖೆ ಕಚೇರಿಗೆ ತಂದ ಭೂಪ

ಹಾಸನದ ವ್ಯಕ್ತಿಯ ಸಾಹಸದ ವೀಡಿಯೊ ಸಖತ್‌ ವೈರಲ್‌

ಹಾಸನ : ವ್ಯಕ್ತಿಯೊಬ್ಬ ಜೀವಂತ ಚಿರತೆಯನ್ನು ಬೈಕಿಗೆ ಕಟ್ಟಿಕೊಂಡು ಅರಣ್ಯಾಧಿಕಾರಿಗಳ ಕಚೇರಿಗೆ ಹೋಗಿ ಒಪ್ಪಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿದ್ದು, ಇದರ ವೀಡಿಯೊ ಸಖತ್‌ ವೈರಲ್‌ ಅಗಿದೆ.
ಸುಮಾರು 9 ತಿಂಗಳು ಪ್ರಾಯದ ಮರಿ ಇದು. ಹಾಸನ ಜಿಲ್ಲೆಯ ಬಾಗಿವಾಲು ಗ್ರಾಮದ ಮುತ್ತು ಎಂಬಾತನೇ ಈಗ ಸುದ್ದಿಯಾಗಿರುವ ಚಿರತೆ ಬೇಟೆಗಾರ. ಚಿರತೆಯ ಕೈಕಾಲು ಕಟ್ಟಿ, ಬೈಕಿನ ಹಿಂಭಾಗಕ್ಕೆ ಬಿಗಿದು ಹಲವು ಕಿಲೋಮೀಟರ್‌ ದೂರದಲ್ಲಿರುವ ಅರಣ್ಯ ಇಲಾಖೆಯ ಕಚೇರಿ ತನಕ ಹೋಗಿ ಅರಣ್ಯಾಧಿಕಾರಿಗಳೀಗೆ ಒಪ್ಪಿಸಿದ್ದಾನೆ.
ನಿತ್ಯ ಚಿರತೆ ಹಾವಳಿಯಿಂದ ಕಂಗೆಟ್ಟಿದೆ. ಹೊಲದಲ್ಲಿರುವಾಗ ದಾಳಿ ಮಾಡಿದ ಚಿರತೆಯನ್ನು ಕಟ್ಟಿ ಹಾಕುವುದಲ್ಲದೆ ಬೇರೆ ದಾರಿಯಿರಲಿಲ್ಲ. ಹೋರಾಡಿ ಹಿಡಿದು ಚಿರತೆಯನ್ನು ಕಟ್ಟಿ ಹಾಕಿದ್ದೇನೆ. ಕೈಕಾಲು ಕಟ್ಟದಿದ್ದರೆ ಅದು ನನ್ನ ಮೇಲೆ ದಾಳಿ ಮಾಡುತ್ತಿತ್ತು ಎಂದು ಮುತ್ತು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾನೆ.
ಮುತುವಿಗೆ ಚಿರತೆಯನ್ನು ಕೊಲ್ಲುವ ಉದ್ದೇಶವಿರಲಿಲ್ಲ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಚಿರತೆ ಬಹಳ ನಿಶ್ಶಕ್ತವಾಗಿದ್ದು, ಅದೀಗ ಅರಣ್ಯ ಇಲಾಖೆಯ ಅರೈಕೆಯಲ್ಲಿದೆ. ಚಿರತೆ ಜತೆ ಹೋರಾಡುವಾಗ ಮುತ್ತುವಿನ ಕೈಗೂ ಗಾಯವಾಗಿದೆ.

















































error: Content is protected !!
Scroll to Top