ಮನೆಯ ಮೇಲೆ ಬಿದ್ದ ಪಿಕಪ್‌ : ಮಹಿಳೆ ಗಂಭೀರ

ಮನೆಯೊಳಗೆ ಸಿಲುಕಿದ ಮಹಿಳೆಯನ್ನು ರಕ್ಷಿಸಲು ಹರಸಾಹಸ

ಮಂಗಳೂರು : ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮನೆ ಮೇಲೆ ಬಿದ್ದು ಮನೆಯೊಳಗಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲದ ಸಮೀಪ ಇಂದು ನಸುಕಿನ ಹೊತ್ತು ಸಂಭವಿಸಿದೆ. ಪಿಕಪ್‌ ವಾಹನ ಮನೆಯ ಮಾಡಿನ ಮೇಲೆ ಉರುಳಿದ್ದ, ಒಳಗಿರುವ ಮಹಿಳೆಯನ್ನು ಹೊರತೆಗೆಯಲು ಸಾಧ್ಯವಾಗಿಲ್ಲ. ಕ್ರೇನ್‌ ಬಳಸಿ ಪಿಕಪನ್ನು ಮಾಡಿನಿಂದ ಎತ್ತಿ ತೆಗೆಯುವ ಕಾರ್ಯಚರಣೆ ನಡೆಯುತ್ತಿದೆ.
ಪರಿಯಲ್ತಡ್ಕ-ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಈ ಘಟನೆ ನಡೆದಿದೆ. ಕೋಳಿ ಸಾಗಿಸುವ ಪಿಕಪ್‌ ನಸುಕಿನ ಹೊತ್ತು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಕೆಳಭಾಗದಲ್ಲಿದ್ದ ಹಂಚಿನ ಮನೆಯ ಮೇಲೆ ಬಿದ್ದಿದೆ. ಮನೆಯ ಮಾಡು ಪೂರ್ತಿಯಾಗಿ ಹಾನಿಗೊಂಡಿದೆ.
ಕೂರೇಲು ಮದ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿರುವ ಮನೆ ಸಂಪೂರ್ಣ ಹಾನಿಯಾಗಿದೆ. ಘಟನೆಯ ವೇಳೆ ಮನೆಯೊಳಗೆ ಮಹಿಳೆ ಮಲಗಿದ್ದರು ಎನ್ನಲಾಗಿದ್ದು, ಗಂಭೀರ ಪರಿಸ್ಥಿಯಲಿದ್ದಾರೆ ಎಂದು ತಿಳಿದು ಬಂದಿದೆ. ವಾಹನವನ್ನು ತೆರವು ಮಾಡದೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಪಿಕಪ್‌ನಲ್ಲಿದ್ದ ನೂರಾರು ಕೋಳಿಗಳು ಕೂಡ ಸತ್ತಿವೆ.

















































error: Content is protected !!
Scroll to Top