ಜಾನುವಾರು ಅಕ್ರಮ ಸಾಗಾಟ : ನಾಲ್ಕು ಮಂದಿ ಸೆರೆ

8 ಜಾನುವಾರು, 3 ಪಿಕಪ್‌ ವಾಹನ ವಶ

ಧರ್ಮಸ್ಥಳ : ಮೂರು ಪಿಕಪ್‌ ವಾಹನಗಳಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿರುವ ಪ್ರಯತ್ನವನ್ನು ಧರ್ಮಸ್ಥಳ ಪೊಲೀಸರು ವಿಫಲಗೊಳಿಸಿದ್ದಾರೆ. ಮೂರು ವಾಹನಗಳಲ್ಲಿ 8 ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ವಾಹನ, ಜಾನುವಾರು ವಶಪಡಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಕನ್ಯಾಡಿ ಸಮೀಪ ಬುಧವಾರ ರಾತ್ರಿ ಬಂಧಿಸಿದ್ದಾರೆ.
ಹಾಸನದ ಅರಕಲಗೂಡು ನಿವಾಸಿ ಚೆನ್ನಕೇಶವ, ನಾವೂರು ಗ್ರಾಮದ ಒಳಗದ್ದೆಯ ಪುಷ್ಪರಾಜ, ನಾವೂರು ಮೊರ್ತಾಜೆಯ ಪ್ರಮೋದ್‌ ಸಾಲ್ಯಾನ್‌ ಮತ್ತು ಹಾಸನ ಹೊಳೆನರಸೀಪುರದ ಸಂದೀಪ್‌ ಸೆರೆಯಾದವರು. ಉಜಿರೆ ಕಡೆಯಿಂದ ಧರ್ಮಸ್ಥಳದತ್ತ ಹೋಗುತ್ತಿದ್ದ ಪಿಕ್‌ಅಪ್‌ಗಳನ್ನು ತಡೆದು ಶೋಧಿಸಿದಾಗ ಜಾನುವಾರುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಮಾರಾಟ ಮಾಡುವ ಉದ್ದೇಶದಿಂದ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಜಾನುವಾರು ಮತ್ತು ವಾಹನ ಸೇರಿ 7.65 ಲ.ರೂ. ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

















































error: Content is protected !!
Scroll to Top