ಕಾರ್ಕಳ : ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಲ್ಲಿನ ಸಹಾಯಕ ಪ್ರಾಧ್ಯಾಪಕಿ ರಾಜಲಕ್ಷ್ಮಿ ಪ್ರಭು ಅವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ಟೆಕ್ನಲಾಜಿಕಲ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಎಂ.ಎಸ್.ಆರ್.ಐ.ಟಿ. ಮುಖ್ಯಸ್ಥೆ ಡಾ. ಸೀಮಾ ಎಸ್. ಅವರ ಮಾರ್ಗದರ್ಶನದಲ್ಲಿ ರಾಜಲಕ್ಷ್ಮಿ ಅವರು ಒಪಿನಿಯನ್ ಮೈನಿಂಗ್ ಆ್ಯಂಡ್ ಸೆಂಟಿಮೆಂಟ್ ಅನಾಲಿಸಿಸ್ ಆಫ್ ಲಾರ್ಜ್ ಸ್ಕೇಲ್ ಡಾಟಾ ಯೂಸಿಂಗ್ ಆರ್ಟಿಫಿಶೀಯಲ್ ಇಂಟಲಿಜೆನ್ಸ್ ಟೆಕ್ನಿಸ್ (Opinion mining and sentiment analysis of large scale data using artificial intelligence techniques) ಎಂಬ ವಿಚಾರದಲ್ಲಿ ಪ್ರಬಂಧ ಮಂಡಿಸಿದ್ದರು.
ರಾಜಲಕ್ಷ್ಮಿ ಪ್ರಭು ಅವರು ಅಜೆಕಾರು ನಿವಾಸಿಯಾಗಿದ್ದು, ಬಂಟ್ವಾಳ ಬಿಸಿ ರೋಡಿನ ಬಿ. ರಾಧಾಕೃಷ್ಣ ಪ್ರಭು ಮತ್ತು ಸುಮನಾ ಪ್ರಭು ದಂಪತಿ ಪುತ್ರಿ. ನಿಟ್ಟೆಯ ಸಹ ಪ್ರಾಧ್ಯಾಪಕ ಡಾ. ಸಂದೀಪ್ ಕುಮಾರ್ ಹೆಗ್ಡೆಯವರ ಪತ್ನಿ.


































































