ರಾಜ್ಯ ಸರಕಾರಕ್ಕೆ ಗಂಡಾಂತರ ಕಾದಿದೆ – ಹರೀಶ್ ಶೆಣೈ

ಕಾಂಗ್ರೆಸ್‌ ಬ್ರದರ್ಸ್‌ ಬಾಂಬ್‌ ಹಿಡಿದು ಬೆದರಿಸುವ ದಿನಗಳು ದೂರವಿಲ್ಲ

ಕಾರ್ಕಳ : 2 ತಿಂಗಳ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರಕ್ಕೆ ಭಾರಿ ಗಂಡಾಂತರ ಕಾದಿದೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಹಲವಾರು ದುರ್ಘಟನೆ ನಡೆದಿರುವುದು ರಾಜ್ಯದ ಜನತೆಯ ದೌರ್ಭಾಗ್ಯ ಎಂದು ಕಾರ್ಕಳ ಬಿಜೆಪಿ ವಕ್ತಾರ ಕೆ. ಎಸ್. ಹರೀಶ್‌ ಶೆಣೈ ತಿಳಿಸಿದ್ದಾರೆ.

ಕರ್ನಾಟಕವನ್ನು ಪಾಕಿಸ್ತಾನದ ಹಾಗೆ ದಿವಾಳಿಯತ್ತ ಕೊಂಡೊಯ್ಯುವ ಬಜೆಟ್‌, ಜಗತ್ತಿಗೆ ಶಾಂತಿ ಸಾರುವ ಜೈನ ಮುನಿಗಳಿಗೆ ಕರೆಂಟ್ ಶಾಕ್ ಕೊಟ್ಟು 9 ತುಂಡುಗಳನ್ನಾಗಿ ಕತ್ತರಿಸಿ ಹತ್ಯೆಯಾಗಿರುವ ಘಟನೆ, ಮೈಸೂರಿನ ಟಿ. ನರಸೀಪುರದ ಯುವ ಬ್ರಿಗೇಡ್ ಸಂಚಾಲಕ ಮತ್ತು ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತನ ಕೊಲೆ, 2 ದಿನಗಳ ಹಿಂದೆ ಮಂಗಳೂರಿನಲ್ಲಿ ಯುವಕನೊಬ್ಬನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಭೀಕರ ಘಟನೆ, ಬಜೆಟ್ ಅಧಿವೇಶನದಲ್ಲಿ ಸಂಶಯಾಸ್ಪದ ವ್ಯಕ್ತಿ ವಿಧಾನಸಭೆಗೆ ಬಂದು ಶಾಸಕರ ಆಸೀನದಲ್ಲಿ ಕೂತಿರುವುದು, ವಿಧಾನಸಭೆ ಅಧಿವೇಶನ ನೋಡಲು ಬಂದಿರುವ ಮಹಿಳೆಯೊಬ್ಬರ ಪರ್ಸ್‌ನಲ್ಲಿ ಚೂರಿ ಸಿಕ್ಕಿರುವುದು, ಇವೆಲ್ಲಾ ಘಟನೆಗಳನ್ನು ನೋಡಿ ಕರ್ನಾಟಕ ರಾಜ್ಯದ ಜನತೆ ಭಯ ಭೀತರಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಬಾಂಬ್ ತಯಾರಿಸುವ ಕಾಂಗ್ರೆಸ್ ಬ್ರದರ್ಸ್‌ಗಳು ಬಾಂಬ್ ಹಿಡಿದು ತಿರುಗಿ ಜನರನ್ನು ಬೆದರಿಸುವ ದಿನಗಳೂ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನ ಆಡಳಿತದಲ್ಲಿ ಹೀಗೆಯೇ ಹಿಂದೂಗಳ ಹತ್ಯೆ ಮುಂದುವರೆದಲ್ಲಿ ಹತ್ಯೆಯಾದವರ ಪೋಷಕರ ಶಾಪ ತಗುಲಿ, ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಗಂಡಾಂತರ ಸ್ವಲ್ಪ ತಿಂಗಳಲ್ಲಿಯೇ ಬರಲಿದೆ ಎಂದು ಹರೀಶ್ ಶೆಣೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

































































error: Content is protected !!
Scroll to Top