ವಾಹನ ಸಮೇತ ಟೊಮೆಟೊ ಅಪಹರಣ

ಬೊಲೆರೊ ಪಿಕ್‌ಅಪ್‌ನಲ್ಲಿ ಸಾಗಿಸುತ್ತಿದ್ದ 2 ಸಾವಿರ ಕೆಜಿ ಟೊಮೆಟೊ ಕಳ್ಳರಪಾಲು

ಬೆಂಗಳೂರು: ಪೆಟ್ರೋಲು, ಸೇಬಿಗಿಂತಲೂ ದುಬಾರಿಯಾಗಿರುವ ಟೊಮೆಟೊ ರಕ್ಷಿಸುವುದೇ ಈಗ ರೈತರಿಗೆ ತಲೆನೋವಿನ ಕೆಲಸವಾಗಿದೆ. ಕೆಲ ದಿನಗಳ ಹಿಂದೆ ಹೊಲದಿಂದಲೇ ನೂರಾರು ಕೆಜಿ ಟೊಮೆಟೊ ಕದ್ದಕೊಂಡು ಹೋದ ಘಟನೆ ನಡೆದಿತ್ತು. ಇದೀಗ ಟೊಮೆಟೊ ಸಾಗಿಸುತ್ತಿದ್ದ ಬೊಲೆರೊ ಪಿಕ್‌ಅಪ್‌ ವಾಹನವನ್ನು ಅಪಹರಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಸುಮಾರು 2 ಸಾವಿರ ಕೆಜಿ ಟೊಮೆಟೊ ವಾಹನ ಸಮೇತ ಅಪಹರಣವಾಗಿದೆ.


ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಘಟನೆ ನಡೆದಿದೆ. ಜು. 8ರಂದು ಬೆಳಗ್ಗೆ ರೈತ ಹಿರಿಯೂರಿನಿಂದ ಕೋಲಾರಕ್ಕೆ ಟೊಮ್ಯಾಟೊ ಸಾಗಿಸುತ್ತಿದ್ದರು. ಇದನ್ನು ಕಂಡ ಮೂವರು ಕಾರಿನಲ್ಲಿ ಟೊಮೆಟೊ ತುಂಬಿದ್ದ ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದು ಆರ್​​ಎಂ​​ಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ವಾಹನವನ್ನು ಅಡ್ಡಗಟ್ಟಿದ್ದಾರೆ. ನಂತರ ಕಾರಿಗೆ ಪೀಣ್ಯಾ ಬಳಿ ನಮ್ಮ ಕಾರಿಗೆ ನಿಮ್ಮ ವಾಹನದಿಂದ ತಾಗಿದೆ ಎಂದು ನಾಟಕವಾಡಿ ಡ್ರೈವರ್​ ಮತ್ತು ರೈತನ ಮೇಲೆ ಹಲ್ಲೆ ಮಾಡಿದ್ದಾರೆ.


ಬಳಿಕ ಮೊಬೈಲ್​ನಲ್ಲಿದ್ದ ಹಣ ಟ್ರಾನ್ಸಫರ್ ಮಾಡಿ ಎಂದು ಹಣ ದೋಚಿದ್ದಾರೆ. ನಂತರ ಬೊಲೊರೋದಲ್ಲಿದ್ದ ಟೊಮೆಟೊ ನೋಡಿ ವಾಹನ ಸಮೇತ ರೈತ ಮತ್ತು ಡ್ರೈವರ್​​ನನ್ನು ಕರೆದುಕೊಂಡು ಚಿಕ್ಕಜಾಲ ತನಕ ಹೋಗಿದ್ದಾರೆ. ಚಿಕ್ಕಜಾಲ ಬಳಿ ಡ್ರೈವರ್​ ಮತ್ತು ರೈತನನ್ನು ಬಿಟ್ಟು ಟೊಮೆಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಆರ್​​ಎಂ​​ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.















































































error: Content is protected !!
Scroll to Top