ಶಿರ್ವ : ಫೇಸ್‌ಬುಕ್‌ ನಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡಿದ ವ್ಯಕ್ತಿಯ ಬಂಧನ

ಶಿರ್ವ : ಫೇಸ್ ಬುಕ್ ನಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡುವ ರೀತಿಯಲ್ಲಿ ಪೋಸ್ಟ್‌ ಶೇರ್‌ ಮಾಡಿದ ವ್ಯಕ್ತಿಯ ಮೇಲೆ ಸುಮೊಟೋ ಕೇಸ್‌ ದಾಖಲಿಸಿ ಶಿರ್ವ ಪೊಲೀಸರು ಬಂಧಿಸಿದ್ದಾರೆ. ಬೆಳಪು ನಿವಾಸಿ ಮೊಹಮ್ಮದ್‌ ಸಿದ್ಧೀಕ್‌ (48) ಬಂಧಿತ ಆರೋಪಿ.

ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಬಿಜೆಪಿ ಮುಖಂಡ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯ ತಲೆ ಮೇಲೆ ಮೂತ್ರ ವಿಸರ್ಜನೆ ಮಾಡುವ ವಿಡಿಯೋ ವೈರಲ್ ಆಗಿತ್ತು. ಇದನ್ನು ಹೋಲುವಂತೆ ಹಿಂದೂ ಸಮುದಾಯಕ್ಕೆ ಸೇರಿದ ವ್ಯಕ್ತಿ ತನ್ನ ಎದುರು ಕುಳಿತಿರುವ ಮತ್ತೊಬ್ಬ ವ್ಯಕ್ತಿಯ ತಲೆ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವಂತಹ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಅನ್ಸಾರ್‌ ರೋಯಲ್‌ ಎಂಬ ಹೆಸರಿನ ಫೇಸ್‌ಬುಕ್‌ ಖಾತೆ ಹೊಂದಿರುವ ವ್ಯಕ್ತಿ ಪೋಸ್ಟ್‌ ಮಾಡಿದ್ದು, ಅದನ್ನು ಆರೋಪಿ ಮೊಹಮ್ಮದ್‌ ಸಿದ್ಧೀಕ್‌ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಹಿಂದೂ ಸಂಸ್ಕೃತಿ ಬೇಕಾ? ನಾಗಪುರದ ಹಿಂದುತ್ವ ಸಂಸ್ಕೃತಿ ಬೇಕಾ ಎನ್ನುವ ಒಕ್ಕಣೆಯೊಂದಿಗೆ ಶೇರ್‌ ಮಾಡಿದ್ದ. ಅನ್ಯ ಸಮುದಾಯಕ್ಕೆ ಸೇರಿದ ವ್ಯಕ್ತಿ ಮದ್ಯಪ್ರದೇಶದ ಘಟನೆಗೆ ಹಿಂದೂ ಧರ್ಮವನ್ನು ಹೋಲಿಕೆ ಮಾಡಿ ಅವಹೇಳನ ಮಾಡುವ ರೀತಿಯಲ್ಲಿ ಪೋಸ್ಟ್‌ ಮಾಡಿರುವುದು ಸಮಾಜದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ದ್ವೇಷದ ಭಾವನೆ ಉಂಟು ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನವಾಗಿದೆ ಎಂಬ ನಿಟ್ಟಿನಲ್ಲಿ ಈತನ ಮೇಲೆ ಶಿರ್ವ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಾಗಿದೆ.













































































error: Content is protected !!
Scroll to Top