ಬೈಕ್‌ ಡಿಕ್ಕಿ – ಪಾದಚಾರಿ ಆಸ್ಪತ್ರೆ ದಾಖಲು

ಕಾರ್ಕಳ : ಯರ್ಲಪಾಡಿಯಲ್ಲಿ ಬೈಕೊಂದು ಪಾದಚಾರಿಗೆ ಡಿಕ್ಕಿ ಹೊಡೆದು ಪಾದಚಾರಿ ಆಸ್ಪತ್ರೆ ದಾಖಲಾದ ಘಟನೆ ಜು. 4 ರಂದು ಸಂಭವಿಸಿದೆ. ರಾಜು ಮೂಲ್ಯ ಎಂಬುವವರು ಮುಂಜಾನೆ ಕಾಂತರಗೋಳಿ ಕಡೆಯಿಂದ ಬೈಲೂರು ಕಡೆಗೆ ವಾಕಿಂಗ್ ಹೋಗುತ್ತಿದ್ದ ಸಂದರ್ಭ ಸಂತೋಷ ಪೂಜಾರಿ ಎಂಬಾತ ಕಾಂತರಗೋಳಿ ಕಡೆಯಿಂದ ಬೈಲೂರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ KA-20-EL-9760 ನೋಂದಾವಣಿಯ ಬೈಕ್‌ ರಾಜು ಮೂಲ್ಯ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ರಾಜು ಮೂಲ್ಯ ರಸ್ತೆ ಬಿದ್ದಿದ್ದಾರೆ ಮತ್ತು ಅವರ ಮುಖ, ಕಣ್ಣಿನ ಬಳಿ ಹಾಗೂ ಕೈ, ಕಾಲುಗಳಿಗೆ ಗಾಯವಾಗಿರುತ್ತದೆ. ಸಂತೋಷ ಪೂಜಾರಿ ಮತ್ತು ಫೈಜಲ್ ಎಂಬುವವರು ಗಾಯಾಳುವನ್ನು ಚಿಕಿತ್ಸೆಗಾಗಿ ಕಾರ್ಕಳದ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾದಿತ ಸಂತೋಷ ಪೂಜಾರಿ ಆಸ್ಪತ್ರೆಯ ಖರ್ಚನ್ನು ಕೊಡುತ್ತೇನೆಂದು ಹೇಳಿದ್ದರು. ಆದರೆ, ಇದುವರೆಗೂ ಆತ ಖರ್ಚನ್ನು ನೀಡಲಿಲ್ಲ ಎಂದು ರಾಜು ಮೂಲ್ಯ ದೂರು ನೀಡಿದ್ದು, ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.













































































error: Content is protected !!
Scroll to Top