ಕಾರ್ಕಳದಲ್ಲಿ ಬಿರುಸಿನ ಮಳೆ – ವಿವಿಧೆಡೆ ಹಾನಿ

ಕಾರ್ಕಳ : ತಾಲೂಕಿನ ವಿವಿಧಡೆ ಜು. 3 ರ ಮಧ್ಯಾಹ್ನದಿಂದ ಬಿರುಸಿನ ಮಳೆಯಾಗಿದೆ. ಅಜೆಕಾರು, ಶಿರ್ಲಾಲು, ಮುಂಡ್ಲಿ, ಕೆರ್ವಾಶೆ, ಮಾಳ, ಬಜಗೋಳಿ, ಈದು, ಸಾಣೂರು, ಕಾಂತವಾರ ಮುಂಡ್ಕೂರು, ನಿಟ್ಟೆ, ಸೇರಿದಂತೆ ತಾಲೂಕಿನಾದ್ಯಂತ ಮಳೆಯಾಗಿದೆ. ಕಾರ್ಕಳ ನಗರ ಭಾಗದಲ್ಲಿ 52.4 ಮಿ. ಮೀ. ಇರ್ವತ್ತೂರಿನಲ್ಲಿ 43.2 ಮಿ. ಮೀ., ಅಜೆಕಾರು 71.6 ಮಿ. ಮೀ., ಸಾಣೂರು 63.4 ಮಿ. ಮೀ., ಕೆದಿಂಜೆ 84.6 ಮಿ. ಮೀ., ಮುಳಿಕಾರು 65.4 ಮಿ. ಮೀ. ಹಾಗೂ ಕೆರ್ವಾಶೆಯಲ್ಲಿ 91 ಮಿ. ಮೀ. ಪ್ರಮಾಣದಲ್ಲಿ ಮಳೆ ದಾಖಲಾಗಿದೆ.

ತಾಲೂಕಿನ ವಿವಿಧೆಡೆ ಹಾನಿ
ಜು. 3 ರಂದು ಸಂಜೆ ಸುರಿದ ಮಳೆಗೆ ಈದು ಗ್ರಾಮದ ಬೊಲ್ಯೊಟ್ಟು ಚಂದಪ್ಪ ಪೂಜಾರಿಯವರ ಮನೆಯ ದನದ ಕೊಟ್ಟಿಗೆಯ ರೀಪು ಮುರಿದಿದ್ದು, ಅಂದಾಜು 15,000 ರೂ. ನಷ್ಟ ಸಂಭವಿಸಿದೆ. ಕಾಂತವಾರದ ಓಡೊಟ್ಟು ಲೋಕಯ್ಯ ಪೂಜಾರಿಯವರ ಮನೆಗೆ ಗಾಳಿ ಮಳೆಗೆ ಮರ ಬಿದ್ದು ಶೀಟು ಹಾನಿಯಾಗಿದೆ.





























































































































error: Content is protected !!
Scroll to Top